ಅಧಿಕಾರ ಮತ್ತು ಕಾರ್ಯಗಳು
ಕೆಳಗಿನ ಅಧಿಕಾರಗಳು ಮತ್ತು ಕಾರ್ಯಗಳನ್ನು ಹೊಂದಿರುತ್ತದೆ, ಅವುಗಳೆಂದರೆ:
- ವಿಶ್ವವಿದ್ಯಾಲಯವು ಸೂಕ್ತವೆಂದು ಭಾವಿಸಬಹುದಾದಂತೆ ಕೃಷಿ ಮತ್ತು ಇತರ ಕಲಿಕೆಯ ಇತರ ಶಾಖೆಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಸೂಚನೆಗಳನ್ನು ಒದಗಿಸುವುದು.
- ಕೃಷಿ ಮತ್ತು ಕಲಿಕೆಯ ಸಂಬಂಧಿತ ಶಾಖೆಗಳಲ್ಲಿ ಸಂಶೋಧನೆ ನಡೆಸುವುದು.
- ವಿಸ್ತರಣಾ ಶಿಕ್ಷಣ ಕಾರ್ಯಕ್ರಮದ ಮೂಲಕ ಸಂಶೋಧನೆ ಮತ್ತು ತಾಂತ್ರಿಕ ಮಾಹಿತಿಯ ಸಂಶೋಧನೆಗಳನ್ನು ಪ್ರಸಾರ ಮಾಡಲು ಒದಗಿಸುವುದು.
- ವಿಶ್ವವಿದ್ಯಾಲಯದಲ್ಲಿ ನಿಗದಿತ ಅಧ್ಯಯನ ಅಥವಾ ಸಂಶೋಧನೆ ಅಥವಾ ಎರಡನ್ನೂ ಅನುಸರಿಸಿದ ವ್ಯಕ್ತಿಗಳು ಅಥವಾ ಅರೆಕಾಲಿಕ ಅಧ್ಯಯನ ಕಾರ್ಯಕ್ರಮಗಳು ಮತ್ತು/ಅಥವಾ ಈ ಉದ್ದೇಶಕ್ಕಾಗಿ ಯಾವುದೇ ಇತರ ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ನಡೆಸಿದ ಸಂಶೋಧನೆಗಳನ್ನು ಒಳಗೊಂಡಂತೆ, ಪದವಿಗಳು, ಡಿಪ್ಲೋಮಾಗಳು ಮತ್ತು ಇತರ ಶೈಕ್ಷಣಿಕ ವಿಶೇಷ ಮನ್ನಣೆಗಳಿಗೆ ಅಧ್ಯಯನ ಕಾರ್ಯಕ್ರಮಗಳನ್ನು ನಿರೂಪಿಸುವುದು ಮತ್ತು ಪರೀಕ್ಷೆಗಳನ್ನು ನಡೆಸುವುದು.
- ಸೂಚಿಸಬಹುದಾದಂತೆ ಗೌರವ ಪದವಿಗಳು ಮತ್ತು ಶೈಕ್ಷಣಿಕ ವಿಶೇಷ ಮನ್ನಣೆಗಳನ್ನು ಪ್ರದಾನಮಾಡುವುದು.
- ರೈತರು, ಕ್ಷೇತ್ರಕಾರ್ಯಕರ್ತರು, ಗ್ರಾಮೀಣ ಯುವಕರು ಮತ್ತು ವಿಶ್ವವಿದ್ಯಾಲಯದ ಸಾಮಾನ್ಯ ವಿದ್ಯಾರ್ಥಿಗಳಾಗಿ ದಾಖಲಾಗದ ಇತರ ವ್ಯಕ್ತಿಗಳಿಗೆ ತರಬೇತಿ ನೀಡುವುದು.
- ವಿಭಾಗ 4 ರಲ್ಲಿ ಸೂಚಿಸಲಾದ ಮಿತಿಗಳಿಗೆ ಒಳಪಟ್ಟು ವಿಶ್ವವಿದ್ಯಾಲಯವು ನಿರ್ಧರಿಸುವ ಉದ್ದೇಶಗಳಿಗಾಗಿ ಇತರ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಸಹಯೋಗ ನೀಡುವುದು.
- ಕೃಷಿ, ಗೃಹ ವಿಜ್ಞಾನ, ಕೃಷಿ ಎಂಜನೀರಿಂಗ್, ಅರಣ್ಯಶಾಸ್ತ್ರ ಮಹಾವಿದ್ಯಾಲಯಗಳು ಮತ್ತು ಇತರ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು.
- ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣಕ್ಕಾಗಿ ಪ್ರಯೋಗಾಲಯಗಳು, ಗ್ರಂಥಾಲಯಗಳು, ಸಂಶೋಧನಾ ಕೇಂದ್ರಗಳು ಹಾಗೂ ಸಂಸ್ಥೆಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು; ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಹುದ್ದೆಗಳನ್ನು ಸೃಷ್ಟಿಸಲು ಮತ್ತು ಅಂತಹ ಹುದ್ದೆಗಳಿಗೆ ವ್ಯಕ್ತಿಗಳನ್ನು ನೇಮಿಸುವುದು.
- ಆಡಳಿತಾತ್ಮಕ ಮತ್ತು ಇತರ ಹುದ್ದೆಗಳನ್ನು ರಚಿಸಲು ಮತ್ತು ಅಂತಹ ಹುದ್ದೆಗಳಿಗೆ ವ್ಯಕ್ತಿಗಳನ್ನು ನೇಮಿಸುವುದು.
- ಶಾಸನಗಳಿಗೆ ಅನುಗುಣವಾಗಿ ಶಿಷ್ಯವೇತನಗಳು, ವಿದ್ಯಾರ್ಥಿವೇತನಗಳು, ಸ್ಟೈಫಂಡ್ಗಳು (ನಿಯಮಿತ ನಿರ್ದಿಷ್ಟ ವೇತನಗಳು) ಮತ್ತು ಬಹುಮಾನಗಳನ್ನು ಸ್ಥಾಪಿಸಲು ಮತ್ತು ಪ್ರಶಸ್ತಿ ನೀಡುವುದು.
- ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ವಸತಿ ಸೌಕರ್ಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು.
- ನಿಗದಿಪಡಿಸಬಹುದಾದಂತಹ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ನಿಗಸದಿಪಡಿಸುವುದು , ಬೇಡಿಕೆಯಿಡುವುದು ಮತ್ತು ಸ್ವೀಕರಿಸುವುದು.
- ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಿವಾಸ ನಡವಳಿಕೆ ಮತ್ತು ಶಿಸ್ತುಗಳ ಮೇಲ್ವಿಚಾರಣೆ ಮಾಡುವುದು ಮತ್ತು ನಿಯಂತ್ರಿಸುವುದು ಹಾಗೂ ಅವರ ಆರೋಗ್ಯ ಮತ್ತು ಕಲ್ಯಾಣವನ್ನು ಉತ್ತೇಜಿಸಲು ವ್ಯವಸ್ಥೆ ಮಾಡುವುದು.
- ವಿದೇಶಗಳಿಂದ ಮತ್ತು ದೇಶದೊಳಗಿಂದ ದೇಣಿಗೆಗಳನ್ನು ಸ್ವೀಕರಿಸುವುದು : ಪರದೇಶದಿಂದ, ವಿದೇಶಿ ಪ್ರತಿಷ್ಠಾನದಿಂದ ಅಥವಾ ಅಂತಹ ದೇಶದಲ್ಲಿರುವ ಯಾವುದೇ ವ್ಯಕ್ತಿಯಿಂದ ಯಾವುದೇ ದೇಣಿಗೆಗಳನ್ನು ವಿಶ್ವವಿದ್ಯಾಲಯವು ಸರ್ಕಾರದ ಪೂರ್ವಾನುಮತಿಯೊಂದಿಗೆ ಹೊರತುಪಡಿಸಿ ಸ್ವೀಕರಿಸಲಾಗದು.
- ವಿಶ್ವವಿದ್ಯಾಲಯವು ಭಾರತದ ಹೊರಗೆ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಅದರ ಸವಲತ್ತುಗಳನ್ನು ಒಪ್ಪಲು ಅನುಮತಿಸುವುದು.
- ವಿವಿಧ ಶಾಸನಗಳ ಅಡಿಯಲ್ಲಿ ನಿರ್ಧರಿಸಿದಂತೆ ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳಲ್ಲಿ ಬೋಧನೆಯನ್ನು ನಡೆಸಲು ಖಾಸಗಿ ಕೃಷಿ ಸಂಸ್ಥೆಗಳಿಗೆ ಅಂಗಸಂಸ್ಥೆಯ ಮನ್ನಣೆ ನೀಡುವುದು.
- ಮೇಲೆ ಹೇಳಿದ ಅಧಿಕಾರಗಳಿಗೆ ಪ್ರಾಸಂಗಿಕವಾಗಿರಲಿ ಅಥವಾ ಇಲ್ಲದಿರಲಿ, ವಿಶ್ವವಿದ್ಯಾಲಯದ ಉದ್ದೇಶಗಳನ್ನು ಹೆಚ್ಚಿಸಲು ಅಗತ್ಯವಿರುವಂತಹ ಎಲ್ಲಾ ಕ್ರಿಯೆ ಮತ್ತು ಕೆಲಸ- ಕಾರ್ಯಗಳನ್ನು ಮಾಡುವುದು.