ಬಿ.ಟೆಕ್ ಪದವಿ ಕಾರ್ಯಕ್ರಮ ( ಬ್ಯಾಚುಲರ್ ಆಫ್ ಟೆಕ್ನಾಲಜಿ)
ಆಹಾರ ಉದ್ಯಮವು ವಿಶ್ವದ ಅತಿದೊಡ್ಡ ಉದ್ಯಮವಾಗಿದೆ ಮತ್ತು ಪ್ರತಿಯೊಬ್ಬರಿಗೂ ಆಹಾರದ ಪೂರೈಕೆ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚು ತರಬೇತಿ ಪಡೆದ ವೃತ್ತಿಪರರ ಅಗತ್ಯವಿದೆ. ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಆಹಾರ ಸಂಸ್ಕರಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ:
- ಆಹಾರ ಸಂಸ್ಕರಣೆಯ ಮಟ್ಟವನ್ನು ಶೇಕಡಾ 6 ರಿಂದ 20 ಮತ್ತು ಮೌಲ್ಯವರ್ಧನೆ ಶೇಕಡಾ 20 ರಿಂದ 35ಕ್ಕೆ ಹೆಚ್ಚಿಸಲು ಅದರ ಕಾರ್ಯತಂತ್ರದ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ
- 1.5 ಮಿಲಿಯನ್ನಷ್ಟು ಕೌಶಲ್ಯ ಅಭಿವೃದ್ಧಿ
- ಸದ್ಯಕ್ಕೆ, ಆಹಾರ ಸಂಸ್ಕರಣಾ ಉದ್ಯಮವು ಸಂಘಟಿತ ವಲಯದಲ್ಲಿ ಒಟ್ಟು ಕಾರ್ಮಿಕರ ಶೇಕಡಾ 16 ಅಂದರೆ 13 ಮಿಲಿಯನ್ ಜನರನ್ನು ಮತ್ತು ಶೇಕಡಾ 32 ರಷ್ಟು ಅಸಂಘಟಿತ ವಲಯದಲ್ಲಿ ಅಂದರೆ 35 ಮಿಲಿಯನ್ ಜನರನ್ನು ಪರೋಕ್ಷವಾಗಿ ನೇಮಿಸಿಕೊಂಡಿದೆ.
ಅನೇಕ ಆಹಾರ ಸಂಸ್ಕರಣಾ ಉದ್ಯಮಗಳ ಬೆಳವಣಿಗೆಯ ಹೊರತಾಗಿಯೂ, ಶಿಕ್ಷಣ ಮತ್ತು ಬಲವಾದ ಮಾನವ ಸಂಪನ್ಮೂಲ ಸಾಮರ್ಥ್ಯಗಳನ್ನು ಸೃಷ್ಟಿಸುವ ತರಬೇತಿಯು ಕಾಣೆಯಾಗಿದೆ. ಆದ್ದರಿಂದ, ಬಿ.ಟೆಕ್. (ಆಹಾರ ತಂತ್ರಜ್ಞಾನ) ಪದವಿ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದಲ್ಲಿ, ಆಹಾರ ಸಂಸ್ಕರಣಾ ಕೈಗಾರಿಕೆಗಳು, ಗ್ರಾಮೀಣ ಅಭಿವೃದ್ಧಿ ಕೇಂದ್ರಗಳು ಮತ್ತು ಆಹಾರ ಗುಣಮಟ್ಟದ ಭರವಸೆ ನೀಡುವ ಪ್ರಯೋಗಾಲಯಗಳ ಅಗತ್ಯತೆಗಳನ್ನು ಪೂರೈಸಲು ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಲಾಯಿತು.
ಬಿ.ಟೆಕ್ (ಆಹಾರ ತಂತ್ರಜ್ಞಾನ) ನಾಲ್ಕು ವರ್ಷಗಳ (8 ಸೆಮಿಸ್ಟರ್ಗಳು) ಪದವಿ ಕಾರ್ಯಕ್ರಮವಾಗಿದ್ದು, ಉತ್ತಮ ರಚನಾತ್ಮಕ ಶೈಕ್ಷಣಿಕ ಯೋಜನೆ ಮತ್ತು ಅಧ್ಯಯನ ಕಾರ್ಯಕ್ರಮಗಳು ಈ ರೀತಿ ಇವೆ.
ಅ.ಸಂ. | ಶಿಸ್ತು | ಕ್ರೆಡಿಟ್ ಅವರ್ಸ್/ಮಾನ್ಯತೆ ಪಡೆದ ಅವಧಿ(ಗಂಟೆಗಳಲ್ಲಿ) |
1 | ಮೂಲಭೂತ ವಿಜ್ಞಾನಗಳು ಮತ್ತು ಮಾನವಿಕಗಳು | 14 (8+6) |
2 | ಆಹಾರ ಸಂಸ್ಕರಣೆ ಮತ್ತು ತಂತ್ರಜ್ಞಾನ | 38 (23+15) |
3 | ಆಹಾರ ಎಂಜನಿಯರಿಂಗ್ | 27 (15+12) |
4 | ಆಹಾರ ಮತ್ತು ಔದ್ಯೋಗಿಕ ಸೂಕ್ಜ ಜೀವವಿಜ್ಙಾನ | 12 (8+4) |
5 | ಆಹಾರ ವಿಜ್ಙಾನ ಮತ್ತು ಪೋಷಣೆ | 14 (8+6) |
6 | ಆಹಾರ ವ್ಯಾಪಾರ ಮತ್ತು ವ್ಯಾಪಾರ ನಿರ್ವಹಣೆ | 08 (6+2) |
7 | ಪೋಷಕ ಅಧ್ಯಯನ ಕಾರ್ಯಕ್ರಮಗಳು | 07 (4+3) |
8 | ತರಬೇತಿಯಲ್ಲಿ- ಕೆಲಸಗಾರ (ಹ್ಯಾಂಡ್ಸ್ – ಆನ್ ಟ್ರೇನಿಂಗ್) | 20 (0+20) |
9 | ಸ್ಥಾನಿಕ ತರಬೇತಿ ಮತ್ತು ಗ್ರಾಮೀಣ ಕೃಷಿ ಕಾರ್ಯಾನುಭವ (ಇನ್-ಪ್ಲಾಂಟ್ ಟ್ರೈನಿಂಗ್ ಮತ್ತು RAWE) | 20 (0+20) |
ಒಟ್ಟು | 160 (72+88) |
ಪ್ರಮುಖ ವಿಭಾಗಗಳು:
ಆಹಾರ ಸಂಸ್ಕರಣೆ ಮತ್ತು ತಂತ್ರಜ್ಞಾನ: ಈ ವಿಭಾಗವು ಆಹಾರ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆ ಬೀಜಗಳು, ಹಣ್ಣುಗಳು, ತರಕಾರಿಗಳು, ಮಸಾಲೆಗಳು ಮತ್ತು ನೆಡುತೋಪಿನ ಬೆಳೆಗಳು, ಹಾಲು, ಮಾಂಸ ಮತ್ತು ಮೀನುಗಳಿಗೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ತಂತ್ರಗಳೊಂದಿಗೆ ವ್ಯವಹರಿಸುತ್ತದೆ. ಇದು ವಿಶೇಷ ಆಹಾರಗಳು, ಸಮಕಾಲೀನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಉತ್ಪನ್ನ ಅಭಿವೃದ್ಧಿ, ಬೇಕರಿ ಮತ್ತು ಮಿಠಾಯಿ ತಂತ್ರಜ್ಞಾನ ಹಾಗೂ ಆಹಾರದ ಗುಣಮಟ್ಟ ಮತ್ತು ಭರವಸೆಯೊಂದಿಗೆ ವ್ಯವಹರಿಸುತ್ತದೆ.
- ಆಹಾರ ಎಂಜಿನೀರಿಂಗ್: ಈ ವಿಭಾಗದಲ್ಲಿ ಆಹಾರ ಉದ್ಯಮಗಳು ಮತ್ತು ಆಹಾರ ಸಂಸ್ಕರಣಾ ಯಂತ್ರಗಳಿಗೆ ಅನ್ವಯವಾಗುವ ಎಂಜಿನೀರಿಂಗ್ನ ಮೂಲ ತತ್ವಗಳನ್ನು ಒಳಗೊಂಡಿದೆ.
- ಆಹಾರ ಮತ್ತು ಕೈಗಾರಿಕಾ ಸೂಕ್ಷ್ಮ ಜೀವವಿಜ್ಞಾನ: ಈ ವಿಭಾಗವು ಆಹಾರ ಸೂಕ್ಷ್ಮ ಜೀವವಿಜ್ಞಾನ, ಹುದುಗುವಿಕೆ ಮತ್ತು ಸಂಸ್ಕರಣಾ ತಂತ್ರಜ್ಞಾನ, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದೊಂದಿಗೆ ವ್ಯವಹರಿಸುತ್ತದೆ.
- ಆಹಾರ ವಿಜ್ಞಾನ ಮತ್ತು ಪೋಷಣೆ: ಈ ವಿಭಾಗವು ಪೌಷ್ಟಿಕಾಂಶ, ಆಹಾರ ರಸಾಯನಶಾಸ್ತ್ರ ಮತ್ತು ಆಹಾರ ವಿಶ್ಲೇಷಣೆಯ ತಂತ್ರಗಳನ್ನು ಒಳಗೊಂಡಿದೆ.
- ಆಹಾರ ವ್ಯಾಪಾರ ಮತ್ತು ವ್ಯವಹಾರ ನಿರ್ವಹಣೆ: ಈ ವಿಭಾಗದಲ್ಲಿ ಮಾರುಕಟ್ಟೆ, ಹಣಕಾಸು, ವ್ಯಾಪಾರ ನಿರ್ವಹಣೆ ಮತ್ತು ಆಹಾರ ಕಾನೂನುಗಳು ಹಾಗೂ ನಿಯಮಗಳು, ಯೋಜನೆಯ ತಯಾರಿ ಹಾಗೂ ಉದ್ಯಮಶೀಲತೆಯ ಅಭಿವೃದ್ಧಿಯನ್ನು ಒಳಗೊಂಡಿದೆ.
ಅಧ್ಯಾಪಕರು ಮತ್ತು ಮೂಲಸೌಕರ್ಯ:
- ಧಾರವಾಡ ಕೃಷಿ ವಿಶ್ವವಿದ್ಯಾಲಯದ ತರಬೇತಿ ಪಡೆದ ಮತ್ತು ಅನುಭವಿ ಅಧ್ಯಾಪಕರನ್ನು ಬೋಧನೆಗಾಗಿ ನಿಯೋಜಿಸಲಾಗಿದೆ..
- ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಎಂಜಿನೀರಿಂಗ್ ಮಹಾವಿದ್ಯಾಲಯಗಳಿಂದ ಅತಿಥಿ ಅಧ್ಯಾಪಕರನ್ನು ನೇಮಿಸಲಾಗಿದೆ.
- ಧುನಿಕ ಉಪಕರಣಗಳು ಮತ್ತು ಸಂಸ್ಕರಣಾ ಸಾಧನಗಳೊಂದಿಗೆ ಸುಸಜ್ಜಿತವಾದ ಅತ್ಯಾಧುನಿಕ ಪ್ರಯೋಗಾಲಯಗಳು.
- ಆಧುನಿಕ ಬೋಧನಾ ಸಾಧನಗಳೊಂದಿಗೆ ಸುಸಜ್ಜಿತ ತರಗತಿ ಕೊಠಡಿಗಳು.
- ಆವರಣದಲ್ಲಿ, ಆಹಾರ ಸಂಸ್ಕರಣಾ ತಂತ್ರಜ್ಞಾನದಲ್ಲಿ ತರಬೇತಿಯಲ್ಲಿ- ಕೆಲಸ / “ಹ್ಯಾಂಡ್ಸ್ ಆನ್ ಟ್ರೈನಿಂಗ್”.
- “7ನೇ ಮತ್ತು 8ನೇ ಸೆಮಿಸ್ಟರ್ಗಳಲ್ಲಿ ಆವರಣದಿಂದ ಹೊರಗಿರುವ ಆಹಾರ ಸಂಸ್ಕರಣಾ ಉದ್ಯಮಗಳಲ್ಲಿ “ಸ್ಥಾನಿಕ ತರಬೇತಿ”.
- ವಿಶ್ವವಿದ್ಯಾಲಯವು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ತಿಳಿವಳಿಕಾ ಜ್ಙಾಪನಾಪತ್ರ (ಎಂಒಯು) ಹೊಂದಿದೆ. ಅಮೆರಿಕದ ಇಥಾಕಾದಲ್ಲಿನ ಕಾರ್ನೆಲ್ ವಿಶ್ವವಿದ್ಯಾಲಯ, ಅಮೆರಿಕದ ಟೆಕ್ಸಾಸ್ ಎ ಆಂಡ್ ಎಮ್ ವಿಶ್ವವಿದ್ಯಾಲಯ, ಅಮೇರಿಕದ ಅಯೋವಾ ಸ್ಟೇಟ್ ಯೂನಿವರ್ಸಿಟಿ ಮತ್ತು ಕೆನಡಾದ ಯೂನಿವರ್ಸಿಟಿ ಆಫ್ ಮ್ಯಾನಿಟೋಬಾಗಳ ಮೂಲಕ ಪರಿಣತಿಯನ್ನು ಸಂಗ್ರಹಿಸಲಾಗುತ್ತದೆ.
ಆಹಾರ ತಂತ್ರಜ್ಞಾನದ ವ್ಯಾಪ್ತಿ:
- ಆಹಾರ ತಂತ್ರಜ್ಞಾನ / ಆಹಾರ ಎಂಜಿನಿರಿಂಗವು ವಿಜ್ಞಾನ, ಸೂಕ್ಷ್ಮ ಜೀವವಿಜ್ಞಾನ ಮತ್ತು ಆಹಾರ ಹಾಗೂ ಸಂಬಂಧಿತ ಉದ್ಯಮಗಳಿಗೆ ಎಂಜಿನಿಯರಿಂಗ್ ಶಿಕ್ಷಣದ ಸಂಯೋಜನೆಯಾಗಿದೆ.
- ಆಹಾರ ಎಂಜಿನಿಯರಿಂಗವು ಕೃಷಿ ಎಂಜಿನಿಯರಿಂಗ್ ಮತ್ತು ಆಹಾರ ಸಾಮಗ್ರಿಗಳಿಗೆ ಅನ್ವಯಿಸುವ ರಾಸಾಯನಿಕ ಎಂಜಿನಿಯರಿಂಗ್ ತತ್ವಗಳನ್ನು ಒಳಗೊಂಡಿದೆ
- ಆಹಾರ ಉದ್ಯಮಗಳಲ್ಲಿ ಆಹಾರ ತಂತ್ರಜ್ಙಾನಿಗಳು, ಎಂಜಿನಿಯರ್ಗಳು, ಪರಿಣಿತರ ಅಗತ್ಯವಿದೆ
- ವಿವಿಧ ಆಹಾರ ಉತ್ಪನ್ನಗಳ ಉತ್ಪಾದನೆ, ಸಂರಕ್ಷಣೆ, ಸಂಸ್ಕರಣೆ ಮತ್ತು ಡಬ್ಬಿ ತುಂಬಿಸುವಿಕೆಯ ನಿರ್ಮಾಣದಲ್ಲಿ ವಿಜ್ಞಾನನದ ತತ್ವಗಳ ಪ್ರಾಯೋಗಿಕ ಅನ್ವಯ.
- ಆಹಾರ ತಂತ್ರಜ್ಞರು ಸಂಶೋಧನೆ/ಉದ್ಯಮ ಕ್ಷೇತ್ರದಲ್ಲಿ ತಮ್ಮ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಪದವೀಧರರಿಗೆ ಉದ್ಯಮಗಳಲ್ಲಿ ಉದ್ಯೋಗಾವಕಾಶಗಳು::
- ಪರಿಣಿತರು
- ಪ್ರಯೋಗಶಾಲಾ ವಿಶ್ಲೇಷಕರು
- ಗುಣಮಟ್ಟದ ಕಾರ್ಯನಿರ್ವಾಹಕರು
- ಗುಣಮಟ್ಟದ ನಿರ್ವಾಹಕರು
- ಉತ್ಪಾದನಾ ಕಾರ್ಯನಿರ್ವಾಹಕರು
- ಉತ್ಪಾದನಾ ಅಧಿಕಾರಿ/ನಿರ್ವಾಹಕರು
- ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥಾಪಕರು
- ಉತ್ಪನ್ನ ಅಭಿವೃದ್ಧಿ ವ್ಯವಸ್ಥಾಪಕರು
ಆಹಾರ ತಂತ್ರಜ್ಞಾನ ಪದವೀಧರರು ಶಿಕ್ಷಣದಲ್ಲಿ ಈ ರೀತಿಯ ಆಯ್ಕೆಗಳನ್ನು ಹೊಂದಿದ್ದಾರೆ:
- ಪ್ರಾಧ್ಯಾಪಕರು
- ವಿಜ್ಞಾನಿಗಳು
- ಸಂಶೋಧನಾ ಕಾರ್ಯನಿರ್ವಾಹಕರು
- ಸಲಹೆಗಾರರು
ಆಹಾರ ಇಂಜಿನಿಯರ್ಗಳಿಗೆ ನಿರೀಕ್ಷಿತ ಪ್ರಮುಖ ಉದ್ಯೋಗದಾತರನ್ನು ಒಳಗೊಂಡಿರುವ ಕಂಪನಿಗಳು:
- ಆಹಾರ ಸಂಸ್ಕರಣೆ
- ಆಹಾರ ಯಂತ್ರೋಪಕರಣಗಳು
- ಪ್ಯಾಕೇಜಿಂಗ್ (ಮೂಟೆ ಕಟ್ಟುವುದು)
- ಪದಾರ್ಥಗಳ ತಯಾರಿಕೆ
- ಉಪಕರಣ ಮತ್ತು ನಿಯಂತ್ರಣ
- ಆಹಾರ ಸಂಸ್ಕರಣಾ ಘಟಕಗಳನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸಂಸ್ಥೆಗಳು
- ಸಮಾಲೋಚಕ ಸಂಸ್ಥೆಗಳು
- ಸರ್ಕಾರಿ ಸಂಸ್ಥೆಗಳು
- ಔಷಧೀಯ ಸಂಸ್ಥೆಗಳು
- ಆರೋಗ್ಯ ಸಂಸ್ಥೆಗಳು