ವಿಸ್ತರಣಾ ಶಿಕ್ಷಣ ಮಂಡಳಿ
ವಿಶ್ವವಿದ್ಯಾಲಯದ ವಿಸ್ತರಣಾ ಶಿಕ್ಷಣ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಪರಿಗಣಿಸಲು ಮತ್ತು ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ಈ ಮಂಡಳಿ ಹೊಂದಿದೆ.
ಕಾರ್ಯಗಳು:
- ಕೃಷಿ ಮತ್ತು ಸಂಬಂಧಿತ ಶಾಖೆಗಳ ಸುಧಾರಣೆಗಾಗಿ ಮತ್ತು ಗ್ರಾಮೀಣ ಸಮುದಾಯಗಳ ಅಭಿವೃದ್ಧಿಗಾಗಿ ವಿಸ್ತರಣಾ ಶಿಕ್ಷಣ ಚಟುವಟಿಕೆಗಳ ಸಮನ್ವಯ;
- ರೈತರ ಶಿಕ್ಷಣ, ತರಬೇತಿ ಮತ್ತು ಸಲಹಾ ಸೇವೆಗಳ ಅಭಿವೃದ್ಧಿ;
- ಕ್ಷೇತ್ರದ ಸಮಸ್ಯೆಗಳ ಗುರುತಿಸುವಿಕೆ ಮತ್ತು ಪರಿಹಾರ ಹಾಗೂ ಮಾಹಿತಿಯ ಪ್ರಸರಣ;
- ವಿಸ್ತರಣಾ ಶಿಕ್ಷಣದ ವಿಧಾನ;
- ವಿಶ್ವವಿದ್ಯಾನಿಲಯದ ಉಪಕುಲಪತಿ, ಆಡಳಿತ ಮಂಡಳಿ ಅಥವಾ ಯಾವುದೇ ಇvರೆ ಸ್ಪರ್ಧಾತ್ಮಕ ಪ್ರಾಧಿಕಾರದಿಂದ ಉಲ್ಲೇಖಿಸಲಾದ ಯಾವುದೇ ಇತರೆÀ ವಿಷಯ.
ಕೃಷಿ ವಿಶ್ವವಿದ್ಯಾಲಯ ಕಾಯಿದೆ, 2009
ವಿಸ್ತರಣಾ ಶಿಕ್ಷಣ ಮಂಡಳಿಯು ಈ ಕೆಳಗಿನ ಸದಸ್ಯರನ್ನು ಒಳಗೊಂಡಿರುತ್ತದೆ.
- ಉಪಕುಲಪತಿ – ಅಧ್ಯಕ್ಷರು;
- ಕೃಷಿ ನಿರ್ದೇಶಕರು, ಕರ್ನಾಟಕ ಸರ್ಕಾರ;
- ಕೃಷಿ ಮಾರುಕಟ್ಟೆ ನಿರ್ದೇಶಕರು, ಕರ್ನಾಟಕ ಸರ್ಕಾರ;
- ತೋಟಗಾರಿಕೆ ನಿರ್ದೇಶಕರು, ಕರ್ನಾಟಕ ಸರ್ಕಾರ;
- ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ.
- ರೇಷ್ಮೆ ಕೃಷಿ ನಿರ್ದೇಶಕರು, ಕರ್ನಾಟಕ ಸರ್ಕಾರ;
- ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ, ಕರ್ನಾಟಕ ಸರ್ಕಾರ;
- ಜಲಾನಯನ ನಿರ್ದೇಶಕರು, ಕರ್ನಾಟಕ ಸರ್ಕಾರ:
- ವಿಶ್ವವಿದ್ಯಾಲಯದ ಎಲ್ಲಾ ನಿರ್ದೇಶಕರು ಮತ್ತು ಡೀನ್ಗಳು;
- ಕುಲಸಚಿವರು;
- ಎಲ್ಲಾ ಸಂಶೋಧನಾ ನಿರ್ದೇಶಕರು ಮತ್ತು ವಿಸ್ತರಣಾ ನಿರ್ದೇಶಕರು:
- ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು;
- ಅವರ ವಿಶೇಷ ಜ್ಞಾನ ಮತ್ತು ಅನುಭವದ ಪ್ರಯೋಜನವನ್ನು ಪಡೆಯಲು ಉಪಕುಲಪತಿಯಿಂದ ನಾಮನಿರ್ದೇಶನಗೊಂಡ ಕೃಷಿ ಮತ್ತು ಸಂಬಂಧಿತ ಶಾಖೆಗಳಲ್ಲಿ ಪರಿಣತಿ ಹೊಂದಿರುವ ಇಬ್ಬರು ಪ್ರಗತಿಪರ ರೈತರು;
- ಅಂತಹ ಸಭೆಯ ಕಾರ್ಯಸೂಚಿಯಲ್ಲಿನ ವಿಷಯಗಳ ಬಗ್ಗೆ ಅವರ ವಿಶೇಷ ಜ್ಞಾನದ ಪ್ರಯೋಜನವನ್ನು ಪಡೆಯಲು ಯಾವುದೇ ಸಭೆಗೆ ಸಂಬಂಧಿಸಿದಂತೆ ಉಪಕುಲಪತಿಯಿಂದ ನಾಮನಿರ್ದೇಶನಗೊಂಡ ವಿಶ್ವವಿದ್ಯಾಲಯದ ಹೊರಗಿನ ಒಬ್ಬ ಶ್ರೇಷ್ಠ ವಿಸ್ತರಣಾ ಶಿಕ್ಷಣತಜ್ಞ;
- ಅಂತಹ ಸಭೆಯ ಕಾರ್ಯಸೂಚಿಯಲ್ಲಿನ ವಿಷಯಗಳ ಬಗ್ಗೆ ಅವರ ವಿಶೇಷ ಜ್ಞಾನದ ಪ್ರಯೋಜನವನ್ನು ಪಡೆದುಕೊಳ್ಳಲು ಯಾವುದೇ ಸಭೆಗೆ ಸಂಬಂಧಿಸಿದಂತೆ ಉಪ-ಕುಲಪತಿಯಿಂದ ನಾಮನಿರ್ದೇಶನಗೊಂಡ ಒಬ್ಬ ಕೃಷಿ-ಕೈಗಾರಿಕೋದ್ಯಮಿ;
- ಉಪಕುಲಪತಿಗಳ ಕೋರಿಕೆಯ ಮೇರೆಗೆ ಈ ಕೆಳಗಿನ ಪ್ರತಿಯೊಂದು ಸಂಸ್ಥೆಗಳಿಂದ ಒಬ್ಬ ಪ್ರತಿನಿಧಿಗಳಂತೆ ಒಟ್ಟು ಐದಕ್ಕೆ ಸೀಮಿತವಾಗಿರಬೇಕು,
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ.
- ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ.
- ಕರ್ನಾಟಕ ಕೃಷಿ ಕೈಗಾರಿಕೆಗಳ ಅಭಿವೃದ್ಧಿ ನಿಗಮ
- ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ.
- ಫರ್ಟಿಲೈಸರ್ ಕಾಪೆರ್Çರೇಷನ್ ಆಫ್ ಇಂಡಿಯಾ
- ರಾಷ್ಟ್ರೀಯ ಬೀಜಗಳ ನಿಗಮ.
- ಯಾವುದೇ ಇತರ ಕೃಷಿ-ಕೈಗಾರಿಕೆ ಅಥವಾ ಕೃಷಿ-ಸೇವಾ ಸಂಸ್ಥೆ/ಬೀಜ ಕಂಪನಿಗಳು.
- ಕರ್ನಾಟಕ ರಾಜ್ಯ ಬೀಜ ನಿಗಮ.
- ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆ.
- ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆ
- ವಿಸ್ತರಣಾ ನಿರ್ದೇಶಕರು – ಸದಸ್ಯ ಕಾರ್ಯದರ್ಶಿ.
ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ ವಿಸ್ತರಣಾ ಶಿಕ್ಷಣ ಮಂಡಳಿಯ ಎಲ್ಲಾ ಸದಸ್ಯರು ಎರಡು ವರ್ಷಗಳ ಅವಧಿಗೆ ಅಧಿಕಾರವನ್ನು ಹೊಂದಿರುತ್ತಾರೆ ಮತ್ತು ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರಗಳಿಗೆ ಪಂಗಡಗಳಿಗೆ ಅರ್ಹರಾಗಿರುವುದಿಲ್ಲ.