ಸಿಬ್ಬಂದಿ ತರಬೇತಿ ಘಟಕ (ಎಸ್ಟಿಯು)

ಸಿಬ್ಬಂದಿ ತರಬೇತಿ ಘಟಕ(ಎಸ್ಟಿಯು)ವನ್ನು 1992 ರಲ್ಲಿ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಆವರಣದÀಲ್ಲಿ ಸ್ಥಾಪಿಸಲಾಯಿತು. ಕರ್ನಾಟಕ ರಾಜ್ಯದ ಒಳಗೆ ಮತ್ತು ಹೊರಗಿನ ವಿವಿಧ ಸಂಸ್ಥೆಗಳ ಸಿಬ್ಬಂದಿಗಳಲ್ಲಿ ವೃತ್ತಿಪರ ಸಾಮಥ್ರ್ಯವನ್ನು ಉತ್ತೇಜಿಸುವುದು ಘಟಕದ ಮುಖ್ಯ ಕಾರ್ಯವಾಗಿದೆ. ಘಟಕವು ಸಾಂಸ್ಥಿಕ ತರಬೇತಿ ಕೋರ್ಸ್ಗಳನ್ನು ಮತ್ತು ಕ್ಷೇತ್ರ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಸರ್ಕಾರಿ ಮತ್ತು ಅರೆ-ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಆಯೋಜಿಸುತ್ತಿದೆ.

ಆದೇಶಗಳು:

  1. ತರಬೇತಿ ಅಗತ್ಯತೆಗಳ ಗುರುತಿಸುವಿಕೆ
  2. ಸೂಕ್ತವಾದ ತರಬೇತಿ ಶಿಕ್ಷಣ ಘಟಕ (ಮಾಡ್ಯೂಲ್) ಗಳ ಅಭಿವೃದ್ಧಿ
  3. ತರಬೇತಿ ಕಾರ್ಯಕ್ರಮಗಳ ವ್ಯವಸ್ಥೆ
  4. ಪ್ರಾಯೋಜಕ ಸಂಸ್ಥೆ ಮತ್ತು ವಿಶ್ವವಿದ್ಯಾಲಯದ ನಡುವಿನ ಸಮನ್ವಯ.
  5. ಪರಿಣಾಮಕಾರಿತ್ವವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಮೌಲ್ಯಮಾಪನ ಮಾಡುವುದು.
  6. ಅಭಿವೃದ್ಧಿ / ಸಂಬಂಧಿತ ಇತರ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು, ಬ್ಯಾಂಕ್ಗಳು ಮತ್ತು ಇತರ ಸಂಸ್ಥೆಗಳ ಸಿಬ್ಬಂದಿಗೆ ಸೇವೆ ಸಲ್ಲಿಸುವುದು
  7. ವಿಶ್ವವಿದ್ಯಾನಿಲಯ, ಅಭಿವೃದ್ಧಿ ಇಲಾಖೆಗಳು ಮತ್ತು ಸಂಬಂಧಿತ ಸಂಸ್ಥೆಗಳ ಸಿಬ್ಬಂದಿಗೆ ಅಗತ್ಯತೆ ಆಧಾರಿತ ತರಬೇತಿ ಕಾರ್ಯಕ್ರಮಗಳ ಸಂಘಟನೆ.

Mega Exhibition of National Agri-Startup Expo

Scroll to Top