Shri. N. Chaluvarayaswamy
Hon’ble Minister for Agriculture Government of Karnataka and Pro-Chancellor of UAS, Dharwad.
ಶ್ರೀ ಚೆಲುವರಾಯಸ್ವಾಮಿಯವರ ಪರಿಚಯ
ಕರ್ನಾಟಕ ಸಕಾರದ ಮಾನ್ಯ ಕೃಷಿ ಸಚಿವರು ಮತ್ತು ನಮ್ಮ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿಗಳು ಆಗಿರುವ ಶ್ರೀ ಚೆಲುವರಾಯಸ್ವಾಮಿಯವರು ಶ್ರೀ. ನರಸಿಂಹೇಗೌಡ ಮತ್ತು ಶ್ರೀಮತಿ ಸಾಕಮ್ಮ ದಂಪತಿಗಳಿಗೆ ಜೂನ್ 1, 1960ರಂದು ಕರ್ನಾಟಕ ಇಜ್ಜಲ-ಘಟ್ಟ ಪ್ರದೇಶದ ನಾಗಮಂಗಲ ತಾಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು. ಸನ್ಮಾನ್ಯರು ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿಯನ್ನು ಹೊಂದಿದ್ದಾರೆ.
ಶ್ರೀ. ಚೆಲುವರಾಯಸ್ವಾಮಿ ಅವರು 1994 ರಿಂದ 1999 ರವರೆಗೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದರು ಮತ್ತು 1996 ರಿಂದ 1997 ರವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ, 1999 ಮತ್ತು 2008ರ ನಡುವೆ ಅವರು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಎರಡು ಅವಧಿಗೆ ಆಯ್ಕೆಯಾದರು. ಅವರು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ, 2009ರಲ್ಲಿ 15ನೇ ಲೋಕಸಭೆಗೆ ಸೇವೆ ಸಲ್ಲಿಸಲು ಮಂಡ್ಯದ ಲೋಕಸಭೆ ಸ್ಥಾನದಿಂದ ಆಯ್ಕೆಯಾದರು. 2013ರಲ್ಲಿ ನಾಗಮಂಗಲದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಲೋಕಸಭೆಯ ಸ್ಥಾನವನ್ನು ತ್ಯಜಿಸಿದರು. ಸನ್ಮಾನ್ಯರು 29 ಮೇ 2023 ರಂದು ಕರ್ನಾಟಕ ರಾಜ್ಯದ ಕೃಷಿ ಸಚಿವರಾಗಿ ನೇಮಕಗೊಂಡಿರುತ್ತಾರೆ.
Shri. N. Cheluvarayaswamy
Hon’ble Agriculture Minister and the Pro- Chancellor of UAS, Dharwad Shri. N. Cheluvarayaswamy amongst us. Shri. Cheluvaraya Swamy was born to Shri. Narasimhegowda and Smt. Sakamma on June 1st, 1960 into an agricultural family in a small village in the Nagamangala taluk of Karnataka’s Ijjala-Ghatta region. Shri. Cheluvarayaswamy grew up in rural Karnataka like any other youth. He holds a civil engineering diploma.
Shri. Cheluvaraya Swamy served as a Zilla Panchayat member from 1994 to 1999 and served as its Vice President from 1996 to 1997. Then, between 1999 and 2008, he was chosen to serve two terms in the Karnataka Legislative Assembly. He served as a cabinet minister in the Karnataka Government. Later, he was chosen from the Lok Sabha seat of Mandya to serve in the 15th Lok Sabha in 2009. When he won a seat in the Karnataka assembly in 2013 from Nagamangala, he had to retire from the Lok Sabha. On May 29th 2023, Shri Cheluvarayaswamy was nominated as Agriculture Minister of Government of Karnataka.