ಮುಧೋಳ ಮತ್ತು ಸಂಕೇಶ್ವರದಲ್ಲಿ ಬೆಲ್ಲದ ಪಾರ್ಕ್
ಮುನ್ನುಡಿ:
- 40 ಮತ್ತು 20 ಖಿಅಆ ಮತ್ತು 10-12 ಗಂಟೆಗಳ ಒಂದೇ ಪಾಳಿಯಲ್ಲಿ ಅರ್ಧದಷ್ಟು ಸಾಮರ್ಥ್ಯದೊಂದಿಗೆ ಮುಧೋಳ ಮತ್ತು ಸಂಕೇಶ್ವರದಲ್ಲಿ ಬೆಲ್ಲದ ಪಾರ್ಕ್ ಸ್ಥಾಪಿಸಲಾಗಿದೆ.
- ಬೆಲ್ಲದ ಪಾರ್ಕ್ ಇಂಧನ ದಕ್ಷತೆಯ ಡಬಲ್ ಪ್ಯಾನ್ ಫರ್ನೇಸ್, ಸಮರ್ಥ ಸ್ಟೇನ್ ಲೆಸ್ ಸ್ಟೀಲ್ 3 ರೋಲರ್ ಸುರಕ್ಷತಾ ಕ್ರಷರ್ಗಳು, ಆಧುನಿಕ ಸ್ಟೇನ್ ಲೆಸ್ ಸ್ಟೀಲ್ ಉಪಕರಣಗಳು, ಬೆಲ್ಲದ ಸಂಗ್ರಹಣೆಯ ಸಂಗ್ರಹಗಾರದಂತಹ ಸೌಲಭ್ಯಗಳ ಪೂರ್ಣ ಪ್ರಮಾಣದ ಮೂಲಸೌಕರ್ಯಗಳನ್ನು ಒಳಗೊಂಡಿದೆ.
- ಗುಣಮಟ್ಟ ನಿಯಂತ್ರಣ ಮತ್ತು ಮಣ್ಣು ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.
- ಮಾರುಕಟ್ಟೆಗೆ ಅನುಕೂಲವಾಗುವಂತೆ ಮಾರ್ಕೆಟಿಂಗ್ ಸೆಲ್, ಮಾಹಿತಿ ಮತ್ತು ತರಬೇತಿ ಕೇಂದ್ರ ಮತ್ತು ಮ್ಯೂಸಿಯಂ ಸೌಲಭ್ಯಗಳನ್ನು ಮತ್ತು ತಂತ್ರಜ್ಞಾನ ಗಳನ್ನು ಪ್ರಚಾರಪಡಿಸಲು ಸ್ಥಾಪಿಸಲಾಗಿದೆ.
ವಿಶ್ವವಿದ್ಯಾಲಯದ ಚಟುವಟಿಕೆಗಳು:
- ಬೆಲ್ಲದ ಸಂಶೋಧನೆ, ತರಬೇತಿ, ಜನಪ್ರಿಯಗೊಳಿಸುವಿಕೆಯೊಂದಿಗೆ ಮಣ್ಣು ಮತ್ತು ಬೆಲ್ಲದ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆ ಕೈಗೊಳ್ಳುವುದರ ಜೊತೆಗೆ ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ.
- ಈಗಾಗಲೇ ಗುರುತಿಸಲಾದ ಎಲೈಟ್ ಕಬ್ಬಿನ ತಳಿಗಳು ಮತ್ತು ಬೆಲ್ಲ ಉತ್ಪಾದನೆಗೆ ಸೂಕ್ತವಾದ ಕೃಷಿ ತಾಂತ್ರಿಕಗಳು ಮತ್ತು ನಿರ್ವಹಣೆ ಕ್ರಮಗಳನ್ನು ಜನಪ್ರಿಯತೆ ಗೊಳಿಸಲು ಮುಂದುವರೆದ ಬೆಂಬಲ ಅವಶ್ಯವಿದೆ.
- ಸಾವಯವ ಬೆಲ್ಲವನ್ನು ಸಂಸ್ಕರಿಸುವ ಮೂಲಕ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯಗಳನ್ನು ಬಳಸಿಕೊಳ್ಳುವ ಅವಶ್ಯಕತೆಯಿದೆ.
- ಕಾರ್ಮಿಕರ ಸಂಖ್ಯೆ ಮತ್ತು ಶ್ರಮವನ್ನು ಕಡಿಮೆ ಮಾಡಲು ಬೆಲ್ಲ ಸಂಸ್ಕರಣಾ ಘಟಕದ ಯಾಂತ್ರೀಕರಣ ಗೊಳಿಸುವುದು.
- ವಿವಿಧ ಮಾರುಕಟ್ಟೆಗಳಿಗೆ ಸರಿಹೊಂದುವಂತೆ ವಿವಿಧ ಆಕಾರದ ಅಚ್ಚುಗಳು, ಹಾಗೂ ವಿವಿಧ ರೀತಿಯ ಬೆಲ್ಲಕ್ಕಾಗಿ ಪ್ಯಾಕಿಂಗ್ ಯಂತ್ರ ಬಳಸುವಿಕೆ.
- ಹೆಚ್ಚು ಅವಧಿಗೆ ಬೆಲ್ಲದ ಗುಣಮಟ್ಟ ಕಾಪಾಡಲು ಪ್ಯಾಕಿಂಗ್ ಮತ್ತು ಶೇಖರಣಾ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವುದು.
- ಸಾವಯವ ಬೆಲ್ಲದ ವಿಚಾರಗೋಷ್ಠಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ರೈತರಿಗೆ ಹಮ್ಮಿಕೋಳ್ಳುದು ಮತ್ತು ತಂತ್ರಜ್ಞಾನಗಳ ವರ್ಗಾವಣೆಗೆ ಕ್ರಮ ಕೈಗೊಳ್ಳುವದು.
- ಗ್ರಾಹಕರು, ವ್ಯಾಪಾರಿಗಳು ಮತ್ತು ಖರೀದಿದಾರ ಮತ್ತು ಸ್ವಯಂ ಉದ್ಯಮೆದಾರರಲ್ಲಿ ಸಾವಯವ ಬೆಲ್ಲ ಜನಪ್ರಿಯಗೊಳಿಸುವುದು.
ಖಾಸಗಿ ಸಹಭಾಗಿತ್ವ:
- ಮಾರ್ಗಸೂಚಿಗಳ ಆಧಾರದ ಮೇಲೆ ಮಾದರಿ ಘಟಕದಿಂದ ಬೆಲ್ಲದ ವಾಣಿಜ್ಯ ಉತ್ಪಾದನೆಯನ್ನು. ಟೆಂಡರ್ ಮೂಲಕ ಗುತ್ತಿಗೆ ಆಧಾರದ ಮೇಲೆ ಖಾಸಗಿ ಪಾಲುದಾರರಿಗೆ ನಿಯೋಜಿಸುವುದು.
- ಬೆಲ್ಲದ ಪಾರ್ಕ್ ಬ್ರಾಂಡ್ ಹೆಸರಿನಲ್ಲಿ ಬೆಲ್ಲವನ್ನು ಮಾರಾಟ ಮಾಡುವುದು.
- ಈಗ ಅಸ್ತಿತ್ವದಲ್ಲಿರುವ ಘಟಕದ ದುರಸ್ತಿ ಮತ್ತು ನಿರ್ವಹಣೆ ಕೈಗೊಳ್ಳುವುದು.
ಅನುದಾನದ ಅವಶ್ಯಕತೆ:
- ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಲು ಆಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳುವುದು.
- ಹೆಚ್ಚು ಪ್ರಮಾಣದಲ್ಲಿ ಜ್ಯೂಸ್ ತೆಗೆಯವುದು ಬಗ್ಗೇಸ್ ಡ್ರೈಯರ್, ಬೆಲ್ಲದ ಪುಡಿ ಮಾಡುವ ಮಿಶ್ರಣ, ಹಾಪರ್, ಗ್ರೇಡಿಂಗ್ ಮೆಷಿನ್, ಪೌಡರ್ ಡ್ರೈಯರ್ ಮತ್ತು ಸ್ಟೋರೇಜ್ ಸಿಲೋ ಇತ್ಯಾದಿಗಳ ಉತ್ತೇಜಿಸಲು ಡಬಲ್ ಕ್ರಷರ್ ಅನ್ನು ಅಳವಡಿಸಿಕೊಳ್ಳವದು.
- ಬೆಲ್ಲದ ಸಂಗ್ರಹಣೆ ಹೆಚ್ಚಿಸಲು ಆಧುನಿಕ ಪ್ಯಾಕಿಂಗ್ ಯಂತ್ರ ಮತ್ತು ತಂತ್ರಜ್ಞಾನಗಳ ಅಳವಡಿಕೆಗೆ ಅನುದಾನ ಅಗತ್ಯವಿದೆ.
- ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುದಾನ ಅವಶ್ಯವಿದೆ.
ಸಾವಯವ ಬೆಲ್ಲ ಸಂಸ್ಥೆ
|
ಕೃಷಿ ಸಂಶೋಧನಾ ಕೇಂದ್ರ, ಸಂಕೇಶ್ವರ (ಪ್ರತಿ ದಿನ 10 ಟನ್ ನುರಿಸುವ ಸಾಮಥ್ರ್ಯದ ಘಟಕ) |
|
ಕೃಷಿ ಸಂಶೋಧನಾ ಕೇಂದ್ರ, ಮುಧೋಳ (ಪ್ರತಿ ದಿನ 20 ಟನ್ ನುರಿಸುವ ಸಾಮಥ್ರ್ಯದ ಘಟಕ) |
|
ಮಾಹಿತಿ ಮತ್ತು ತರಬೇತಿ ಕೇಂದ್ರ, ಮುಧೋಳ |
- ಉತ್ತಮ ಕಬ್ಬಿನ ತಳಿಗಳನ್ನು ಅಭಿವೃದ್ದಿಪಡಿಸುವುದು
- ಉತ್ತಮ ಗುಣಮಟ್ಟದ ಸಾವಯವ ಬೆಲ್ಲ ತಯಾರಿಕೆಗಾಗಿ ಸ್ಟೇನ್ ಲೆಸ್ ಸ್ಟೀಲ್ ಘಟಕಗಳು ಮತ್ತು ಉತ್ಪಾದನಾ ವಿಧಾನಗಳನ್ನು ಪ್ರಾತ್ಯಕ್ಷಿಕೆಗಳ ಮುಖಾಂತರ ಪ್ರಚುರ ಪಡಿಸುವುದು..
- ಕಬ್ಬಿನ ರಸ ಸ್ವಚ್ಚಗೊಳಿಸಲು ವನಸ್ಪತಿ ಹಾಗೂ ಸುರಕ್ಷಿತ ರಾಸಾಯನಿಕಗಳ ಬಳಕೆಯ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳುವುದು
- ಬೆಲ್ಲದ ವಿವಿಧ ವಾಣಿಜ್ಯ ನಮೂನೆಗಳ ಉತ್ಪಾದನಾ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ, ಉತ್ಪಾದನೆ ಘಟಕಗಳ ಸ್ಥಾಪನೆ ಹಾಗೂ ತರಬೇತಿಗಳನ್ನು ಕೈಗೊಳ್ಳುವುದು
- ಸಾವಯವ ಬೆಲ್ಲ ಉತ್ಪಾದಿಸುವ ರೈತರಿಗಾಗಿ ವಿವಿಧ ತರಬೇತಿಗಳು ಹಾಗೂ ವಿಚಾರಗೋಷ್ಠಿಗಳನ್ನು ಆಯೋಜಿಸುವುದು.
Crushing unit ಕಬ್ಬು ನುರಿಸುವ ಘಟಕ
|
ಪ್ಲಾನೆಟರಿ ಗೀರ್ ಬಾಕ್ಸ್ ಅಳವಡಿಸಿದ ಕ್ರಷರ್ನಿಂದ ಕಡಿಮೆ ವಿಧ್ಯತ್ ಬಳಕೆ ಮತ್ತು ಕಾರ್ಮಿಕರಿಗೆ ಸುರಕ್ಷತೆ |
ಕಬ್ಬು ಮಳೆ ಮತ್ತು ಬಿಸಿಲಿಗೆ ತಗುಲುವುದಿಲ್ಲಾ. ಆದ್ದರಿಂದ ಉತ್ತಮ ಗುಣಮಟ್ಟವನ್ನು ಹೆಚ್ಚಿನ ಅವಧಿಯವರೆಗೆ ಕಾಯ್ದುಕೊಳ್ಳುತ್ತದೆ |
|
ಕೋನಾಕಾರದ ಕಬ್ಬಿನ ಹಾಲು ಶೇಖರಿಸುವ ಟ್ಯಾಂಕ್ ಮತ್ತು ಇಳಿಜಾರು ತಳವಿರುವ ಸೆಟ್ಲಿಂಗೆ ಟ್ಯಾಂಕ್ |
|
|
ಕೋನಾಕಾರದ ಕಬ್ಬಿನ ಹಾಲು ಶೇಖರಿಸುವ ಟ್ಯಾಂಕ್ನಿಂದ ರಸದಲ್ಲಿಯ ಮಣ್ಣು, ಉಸುಕು, ಸಿಲಿಕಾ ಮತ್ತು ಇತರೆ ದಪ್ಪ ಕಣಗಳು ತಳದಲ್ಲಿ ಉಳಿಯುವುದರಿಂದ ಬೆಲ್ಲದಲ್ಲಿ ಇವುಗಳ ಪ್ರಮಾಣ ಕಡಿಮೆಯಾಗುವುದು. |
ಸೆಟ್ಲಿಂಗೆ ಟ್ಯಾಂಕ್ ಅಳವಡಿಕೆಯಿಂದ ಕಲ್ಮಷಗಳು ತಳಗೆ ಕುಳಿತು ಬೆಲ್ಲ ಸಂಸ್ಕರಣೆಗೆ ಹೆಚ್ಚಿನ ರಾಸಾಯನಿಕದ ಅವಶ್ಯಕವಿರುವುದಿಲ್ಲಾ. |
ಉತ್ತಮ ಗುಣಮಟ್ಟದ ಬೆಲ್ಲ ತಯಾರಿಕೆಗೆ ಆಹಾರ ಗುಣಮಟ್ಟದ ಸ್ಟೇನ್ ಲೆಸ್ ಸ್ಟೀಲ್ನಿಂದ (ಎಸ್ ಎಸ್. 304) ತಯಾರಿಸಿದ ಕಬ್ಬಿನ ಹಾಲು ಕುದಿಸುವ ಗಂಗಾಳ / ಕೊಪ್ಪರಿಕೆ
ಕಬ್ಬಿನ ಹಾಲು ಸಂಪರ್ಕ ಹೊಂದುವ ಎಲ್ಲಾ ಬಾಗಗಳು ಸಹ ಆಹಾರ ಗುಣಮಟ್ಟದ (ಎಸ್. ಎಸ್. 304) ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಲಾಗಿದೆಯಾದ್ದರಿಂದ ಕಬ್ಬಿಣದ ಕಲ್ಮಷಗಳು ಬೆಲ್ಲದಲ್ಲಿ ಬರುವುದಿಲ್ಲಾ.
ಸ್ವಚ್ಚವಾದ ಬೆಲ್ಲದ ಪಾಕ ತಂಪಾಗಿಸುವ ಕಟ್ಟೆ
ಉತ್ತಮ ಗುಣಮಟ್ಟದ ಬೆಲ್ಲದ ಪೆಂಟಿ ಮತ್ತು ಬೆಲ್ಲ ಸಂಗ್ರಹಿಸಲು ಉತ್ತಮ ಉಗ್ರಾಣ ಮತ್ತು ರ್ಯಾಕ್ಗಳು
ಸಾವಯವ ಬೆಲ್ಲ
ಉಪಯೋಗಗಳು
ನೈಸರ್ಗಿಕವಾದ ಖನಿಜ ಮತ್ತು ಲವಣಾಂಷ್ಹಗಳ ಆಗರ (ರಂಜಕ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ ಮತ್ತು ಪೋಟ್ಯಾಷ್)
- ಆಯುರ್ವೆದದ ಔಷಧವಾಗಿ ಒಣ ಕೆಮ್ಮು, ಶೀತ, ಆಸ್ತಮ ಮತ್ತು ಇತರೆ ರೋಗಗಳನ್ನು ಗುಣಪಡಿಸಲು ಉಪಯೋಗ
- ದೇಹದ ಅಂಗಾಗಳನ್ನು (ಶ್ವಾಷಕೋಶ, ಅನ್ನನಾಳ & ಕರಳು ಇತರೆ) ಸ್ವಚ್ಚಗೊಳಿಸುವುದು.
- ಆಹಾರ ಪಚನಕ್ರಿಯೆ ಉತ್ತಮಗೊಳಿಸಿ, ಮಲಬದ್ಧತೆ ಕಡಿಮೆಗೊಳಿಸುವುದು
- ನರ, ರಕ್ತ ನಾಳ ಮತ್ತು ಮಾಂಸ ಖಂಡಗಳ ಕ್ರಿಯೆಗಳನ್ನು ಉತ್ತೇಜಿಸಿ, ತಲೆನೋವು, ಅರೆ ತಲೆನೋವು ಮತ್ತು ಸುಸ್ತು ಮಿತಗೊಳಿಸುವಲ್ಲಿ ಸಹಕಾರಿ
- ರಕ್ತ ಶುದ್ದತೆಯನ್ನು ಹೆಚ್ಚಿಸಿ, ರಕ್ತದೊತ್ತಡ ಮತ್ತು ರಕ್ತ ಹೀನತೆಯನ್ನು ಕಡಿಮೆಗೊಳಿಸುವುದು.
ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆಯಲ್ಲಿಯ ಸೌಲಭ್ಯಗಳು
- ಆಹಾರ ಗುಣಮಟ್ಟದ 304 ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಿದ ಉಪಕರಣ ಗಳನ್ನೋಳಗೊಂಡ ಉತ್ತಮ ಮಾದರಿಯ ಬೆಲ್ಲ ತಯಾರು ಮಾಡುವ ಘಟಕಗಳು
- ಕಬ್ಬು ನುರಿಸುವ, ಬೆಲ್ಲ ಕುದಿಸುವ ಘಟಕ,
- ಬೆಲ್ಲವನ್ನು ಶೇಖರಿಸಲು ಬೇರೆ ಬೇರೆ ಕೋಣೆಗಳು, ಉಗ್ರಾಣ
- ಮಣ್ಣು ಮತ್ತು ಬೆಲ್ಲ ಗುಣ ಮಟ್ಟ ನಿಯಂತ್ರಣದ ಪ್ರಯೋಗಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
- ವಿಧ್ಯುತ್ ಅಡಚಣೆ ಸರಿದೂಗಿಸಲು, 50 ಕೆ.ವಿ. ಜನರೇಟರನ್ನು ಅಳವಡಿಸಲಾಗಿದೆ
ಸುಧಾರಿತ ಮಾದರಿಯ ಆಹಾರ ಗುಣಮಟ್ಟದ 304 ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಿದ ಉಪಕರಣಗಳನ್ನೋಳಗೊಂಡ ಗುಣಮಟ್ಟದ ಬೆಲ್ಲ ಉತ್ಫಾದಿಸುವ ಘಟಕ
ಬೆಲ್ಲದ ವಿವಿಧ ಉತ್ಪನ್ನಗಳು
|
ಪೆಂಟಿ ಬೆಲ್ಲ : 1, 5 & 10 ಕಿ. ಗ್ರಾಂ Solid Jaggery : 1, 5 & 10 kg ಬೆಲ್ಲದ ಪುಡಿಯ ವಿವಿಧ ಆಕಾರದ ಮತ್ತು ಬೆಲ್ಲದ ಉತ್ಪನ್ನಗಳು ಎಲ್ಲಾ ನಮೂನೆಯ (ಹಚ್ಚು, ಪುಡಿ ಮತ್ತು ದ್ರವ ರೂಪದ) ಬೆಲ್ಲ ತಯಾರಿಕೆಯನ್ನು ಮಾಡಬಹುದು |
ಜಾಗರಿ ಪಾರ್ಕ್, ಕೃ. ಸಂ. ಕೇಂದ್ರ, ಮುಧೋಳದಲ್ಲಿ
ಮಾರುಕಟ್ಟೆ ಕೋಶ, ಮಾಹಿತಿ ಕೇಂದ್ರ, ಮ್ಯೂಸಿಯಂ ಮತ್ತು ತರಬೇತಿ ಕೇಂದ್ರದ ವ್ಯವಸ್ಥೆ ಮಾಡಿ ತರಬೇತಿ ನೀಡಲಾಗುತ್ತಿದೆ.

