ಕೃಷಿ ವಿಶ್ವವಿದ್ಯಾನಿಲಯ, ಧಾರವಾಡದ ವಿಸ್ತರಣಾ ನಿರ್ದೇಶನಾಲಯದಲ್ಲಿ ಇಬ್ಬರು ವಿಸ್ತರಣಾ ಸಹನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ, ಒಬ್ಬರು ಕೇಂದ್ರಸ್ಥಾನ ಧಾರವಾಡದಲ್ಲಿ ಮತ್ತೊಬ್ಬರು ವಿಜಯಪುರದಲ್ಲಿಕಾರ್ಯನಿರ್ವಹಿಸುತ್ತಿದ್ದಾರೆ. ವಿಸ್ತರಣಾ ಸಹ ನಿರ್ದೇಶಕರು, ವಿಜಯಪುರ ಇವರ ಅಡಿಯಲ್ಲಿ ಬರುವ ಮೂರು ಜಿಲ್ಲೆಗಳ (ಗದಗ, ಬಾಗಲಕೋಟೆ ಮತ್ತು ವಿಜಯಪುರ) ವ್ಯಾಪ್ತಿಯಲ್ಲಿ ಮೂರು ಕೃಷಿ ವಿಜ್ಞಾನ ಕೇಂದ್ರಗಳು (ವಿಜಯಪುರ-I, ವಿಜಯಪುರ-II ಮತ್ತು ಬಾಗಲಕೋಟೆ) ಮತ್ತು ಎರಡು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು (ಮುಧೋಳ ಮತ್ತು ವಿಜಯಪುರ) ಇರುತ್ತವೆ.

ಇಬ್ಬರು ವಿಸ್ತರಣಾ ಸಹನಿರ್ದೇಶಕರು ತಮ್ಮ ಜಿಲ್ಲೆಯ ಕೃಷಿ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು,್ತ ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ಕೃಷಿ ಸಲಹೆಗಳನ್ನು ನೀಡುತ್ತಿದ್ದಾರೆ ಮತ್ತು ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ದ್ವೈಮಾಸಿಕ ಕಾರ್ಯಾಗಾರಗಳನ್ನು ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರೊಂದಿಗೆ ಏರ್ಪಡಿಸಿ ಕ್ಷೇತ್ರದ ಪರಿಸ್ಥಿತಿ, ಕ್ಷೇತ್ರದ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ಪಡೆಯಲು ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೃಷಿ ಅಧಿಕಾರಿಗಳಿಗೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡದ ಸಹಾಯದಿಂದ ಪರಿಹಾರವನ್ನು ಒದಗಿಸಲಾಗುತ್ತದೆ. ಮತ್ತು ಸುಸ್ಥಿರ ಆಧಾರದ ಮೇಲೆ ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಲು ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ಶಿಕ್ಷಣ ನೀಡುತ್ತಾರೆ.

ಹೊಸ ವರ್ಷ ನಮ್ಮ ಭಾವನೆಗಳನ್ನು ಇನ್ನಷ್ಟು ಹೊಸದಾಗಿಸುವ ಸಮಯ. ನಮ್ಮೆಲ್ಲರ ಸಂಬಂಧ ಹೊಸತರಂತೆ ಮಿನುಗಲಿ. ಹೊಸ ವರ್ಷದ ಶುಭಾಶಯಗಳು 2026

 

Scroll to Top