ವಿಸ್ತರಣಾ ಶಿಕ್ಷಣ ಮಂಡಳಿ

ವಿಶ್ವವಿದ್ಯಾಲಯದ ವಿಸ್ತರಣಾ ಶಿಕ್ಷಣ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಪರಿಗಣಿಸಲು ಮತ್ತು ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ಈ ಮಂಡಳಿ ಹೊಂದಿದೆ.

ಕಾರ್ಯಗಳು:

  • ಕೃಷಿ ಮತ್ತು ಸಂಬಂಧಿತ ಶಾಖೆಗಳ ಸುಧಾರಣೆಗಾಗಿ ಮತ್ತು ಗ್ರಾಮೀಣ ಸಮುದಾಯಗಳ ಅಭಿವೃದ್ಧಿಗಾಗಿ ವಿಸ್ತರಣಾ ಶಿಕ್ಷಣ ಚಟುವಟಿಕೆಗಳ ಸಮನ್ವಯ;
  • ರೈತರ ಶಿಕ್ಷಣ, ತರಬೇತಿ ಮತ್ತು ಸಲಹಾ ಸೇವೆಗಳ ಅಭಿವೃದ್ಧಿ;
  • ಕ್ಷೇತ್ರದ ಸಮಸ್ಯೆಗಳ ಗುರುತಿಸುವಿಕೆ ಮತ್ತು ಪರಿಹಾರ ಹಾಗೂ ಮಾಹಿತಿಯ ಪ್ರಸರಣ;
  • ವಿಸ್ತರಣಾ ಶಿಕ್ಷಣದ ವಿಧಾನ;
  • ವಿಶ್ವವಿದ್ಯಾನಿಲಯದ ಉಪಕುಲಪತಿ, ಆಡಳಿತ ಮಂಡಳಿ ಅಥವಾ ಯಾವುದೇ ಇvರೆ ಸ್ಪರ್ಧಾತ್ಮಕ ಪ್ರಾಧಿಕಾರದಿಂದ ಉಲ್ಲೇಖಿಸಲಾದ ಯಾವುದೇ ಇತರೆÀ ವಿಷಯ.

ಕೃಷಿ ವಿಶ್ವವಿದ್ಯಾಲಯ ಕಾಯಿದೆ, 2009

ವಿಸ್ತರಣಾ ಶಿಕ್ಷಣ ಮಂಡಳಿಯು ಈ ಕೆಳಗಿನ ಸದಸ್ಯರನ್ನು ಒಳಗೊಂಡಿರುತ್ತದೆ.

  • ಉಪಕುಲಪತಿ – ಅಧ್ಯಕ್ಷರು;
  • ಕೃಷಿ ನಿರ್ದೇಶಕರು, ಕರ್ನಾಟಕ ಸರ್ಕಾರ;
  • ಕೃಷಿ ಮಾರುಕಟ್ಟೆ ನಿರ್ದೇಶಕರು, ಕರ್ನಾಟಕ ಸರ್ಕಾರ;
  • ತೋಟಗಾರಿಕೆ ನಿರ್ದೇಶಕರು, ಕರ್ನಾಟಕ ಸರ್ಕಾರ;
  • ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ.
  • ರೇಷ್ಮೆ ಕೃಷಿ ನಿರ್ದೇಶಕರು, ಕರ್ನಾಟಕ ಸರ್ಕಾರ;
  • ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ, ಕರ್ನಾಟಕ ಸರ್ಕಾರ;
  • ಜಲಾನಯನ ನಿರ್ದೇಶಕರು, ಕರ್ನಾಟಕ ಸರ್ಕಾರ:
  • ವಿಶ್ವವಿದ್ಯಾಲಯದ ಎಲ್ಲಾ ನಿರ್ದೇಶಕರು ಮತ್ತು ಡೀನ್ಗಳು;
  • ಕುಲಸಚಿವರು;
  • ಎಲ್ಲಾ ಸಂಶೋಧನಾ ನಿರ್ದೇಶಕರು ಮತ್ತು ವಿಸ್ತರಣಾ ನಿರ್ದೇಶಕರು:
  • ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ಮುಖ್ಯಸ್ಥರು;
  • ಅವರ ವಿಶೇಷ ಜ್ಞಾನ ಮತ್ತು ಅನುಭವದ ಪ್ರಯೋಜನವನ್ನು ಪಡೆಯಲು ಉಪಕುಲಪತಿಯಿಂದ ನಾಮನಿರ್ದೇಶನಗೊಂಡ ಕೃಷಿ ಮತ್ತು ಸಂಬಂಧಿತ ಶಾಖೆಗಳಲ್ಲಿ ಪರಿಣತಿ ಹೊಂದಿರುವ ಇಬ್ಬರು ಪ್ರಗತಿಪರ ರೈತರು;
  • ಅಂತಹ ಸಭೆಯ ಕಾರ್ಯಸೂಚಿಯಲ್ಲಿನ ವಿಷಯಗಳ ಬಗ್ಗೆ ಅವರ ವಿಶೇಷ ಜ್ಞಾನದ ಪ್ರಯೋಜನವನ್ನು ಪಡೆಯಲು ಯಾವುದೇ ಸಭೆಗೆ ಸಂಬಂಧಿಸಿದಂತೆ ಉಪಕುಲಪತಿಯಿಂದ ನಾಮನಿರ್ದೇಶನಗೊಂಡ ವಿಶ್ವವಿದ್ಯಾಲಯದ ಹೊರಗಿನ ಒಬ್ಬ ಶ್ರೇಷ್ಠ ವಿಸ್ತರಣಾ ಶಿಕ್ಷಣತಜ್ಞ;
  • ಅಂತಹ ಸಭೆಯ ಕಾರ್ಯಸೂಚಿಯಲ್ಲಿನ ವಿಷಯಗಳ ಬಗ್ಗೆ ಅವರ ವಿಶೇಷ ಜ್ಞಾನದ ಪ್ರಯೋಜನವನ್ನು ಪಡೆದುಕೊಳ್ಳಲು ಯಾವುದೇ ಸಭೆಗೆ ಸಂಬಂಧಿಸಿದಂತೆ ಉಪ-ಕುಲಪತಿಯಿಂದ ನಾಮನಿರ್ದೇಶನಗೊಂಡ ಒಬ್ಬ ಕೃಷಿ-ಕೈಗಾರಿಕೋದ್ಯಮಿ;
  • ಉಪಕುಲಪತಿಗಳ ಕೋರಿಕೆಯ ಮೇರೆಗೆ ಈ ಕೆಳಗಿನ ಪ್ರತಿಯೊಂದು ಸಂಸ್ಥೆಗಳಿಂದ ಒಬ್ಬ ಪ್ರತಿನಿಧಿಗಳಂತೆ ಒಟ್ಟು ಐದಕ್ಕೆ ಸೀಮಿತವಾಗಿರಬೇಕು,
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ.
  • ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ.
  • ಕರ್ನಾಟಕ ಕೃಷಿ ಕೈಗಾರಿಕೆಗಳ ಅಭಿವೃದ್ಧಿ ನಿಗಮ
  • ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ.
  • ಫರ್ಟಿಲೈಸರ್ ಕಾಪೆರ್Çರೇಷನ್ ಆಫ್ ಇಂಡಿಯಾ
  • ರಾಷ್ಟ್ರೀಯ ಬೀಜಗಳ ನಿಗಮ.
  • ಯಾವುದೇ ಇತರ ಕೃಷಿ-ಕೈಗಾರಿಕೆ ಅಥವಾ ಕೃಷಿ-ಸೇವಾ ಸಂಸ್ಥೆ/ಬೀಜ ಕಂಪನಿಗಳು.
  • ಕರ್ನಾಟಕ ರಾಜ್ಯ ಬೀಜ ನಿಗಮ.
  • ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆ.
  • ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆ
  • ವಿಸ್ತರಣಾ ನಿರ್ದೇಶಕರು – ಸದಸ್ಯ ಕಾರ್ಯದರ್ಶಿ.

            ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ ವಿಸ್ತರಣಾ ಶಿಕ್ಷಣ ಮಂಡಳಿಯ ಎಲ್ಲಾ ಸದಸ್ಯರು ಎರಡು ವರ್ಷಗಳ ಅವಧಿಗೆ ಅಧಿಕಾರವನ್ನು ಹೊಂದಿರುತ್ತಾರೆ ಮತ್ತು ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರಗಳಿಗೆ ಪಂಗಡಗಳಿಗೆ ಅರ್ಹರಾಗಿರುವುದಿಲ್ಲ.

ಹೊಸ ವರ್ಷ ನಮ್ಮ ಭಾವನೆಗಳನ್ನು ಇನ್ನಷ್ಟು ಹೊಸದಾಗಿಸುವ ಸಮಯ. ನಮ್ಮೆಲ್ಲರ ಸಂಬಂಧ ಹೊಸತರಂತೆ ಮಿನುಗಲಿ. ಹೊಸ ವರ್ಷದ ಶುಭಾಶಯಗಳು 2026

 

Scroll to Top