ನ್ಯಾಯವ್ಯಾಪ್ತಿ

  1. ಪ್ರತಿಯೊಂದು ವಿಶ್ವವಿದ್ಯಾಲಯವು . ಅದರ ಪ್ರಾದೇಶಿಕ ನ್ಯಾಯವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಅಗತ್ಯವಿರಬಹುದಾದ ಕೃಷಿ, ಪಶು ಪಾಲನೆ, ಮೀನುಗಾರಿಕೆ, ರೇಷ್ಮೆ ಕೃಷಿ ಮತ್ತು ಅರಣ್ಯ ತರಬೇತಿ ಅಥವಾ ಶೈಕ್ಷಣಿಕ ಕೇಂದ್ರಗಳು ಹಾಗೂ ಸಂಶೋಧನೆ ಮತ್ತು ಪ್ರಾಯೋಗಿಕ ಕೇಂದ್ರಗಳ ನಿರ್ವಹಣೆ ಹಾಗೂ ಕ್ಷೇತ್ರ ವಿಸ್ತರಣಾ ಕಾರ್ಯಕರ್ತರ ತರಬೇತಿ ಕಾರ್ಯಕ್ರಮಗಳಿಗೆ ಮತ್ತು ಅಂತಹ ಕೇಂದ್ರಗಳ ಸ್ಥಾಪನೆ, ಅಭಿವೃದ್ಧಿ ಹಾಗೂ ಕಾರ್ಯಾಚರಣೆಗೆ ಜವಾಬ್ದಾರರಾಗಿರುತ್ತಾರೆ.
  2. ಎಲ್ಲಾ ಮಹಾವಿದ್ಯಾಲಯಗಳು, ಸಂಶೋಧನೆ ಮತ್ತು ಪ್ರಾಯೋಗಿಕ ಕೇಂದ್ರಗಳು, ಕೃಷಿ ವಿಜ್ಙಾನ ಕೇಂದ್ರಗಳು ಮತ್ತು ವಿಸ್ತರಣಾ ಶಿಕ್ಷಣ ಮತ್ತು ವಿಶ್ವವಿದ್ಯಾಲಯದ ನಿರ್ವಹಣೆಯಲ್ಲಿರುವ ಇತರ ತರಬೇತಿ ಕೇಂದ್ರಗಳು ಅಥವಾ ಪ್ರತಿ ವಿಶ್ವವಿದ್ಯಾನಿಲಯದ ಅಧಿಕಾರ ವ್ಯಾಪ್ತಿ ಮತ್ತು ಅಧಿಕಾರದಲ್ಲಿರುವ ಇತರ ಸಂಸ್ಥೆಗಳು, ಆಯಾ ವಿಶ್ವವಿದ್ಯಾಲಯದ ಅಂಗಘಟಕಗಳಗಾಗಿರುವವು ಮತ್ತು ವಿಶ್ವವಿದ್ಯಾಲಯದ ನಿರ್ವಹಣೆ ಹಾಗೂ ನಿಯಂತ್ರಣದ ಅಡಿಯಲ್ಲಿರುತ್ತವೆ.. ಮಹಾವಿದ್ಯಾಲಯವನ್ನು ಸಂಯೋಜಿತ ಘಟಕವೆಂದು ವಿಶ್ವವಿದ್ಯಾಲಯದಿಂದ ಗುರುತಿಸಿರದ ಹೊರತು ಯಾವುದೇ ಘಟಕವನ್ನು ಸಂಯೋಜಿತ ಘಟಕವೆಂದು ಗುರುತಿಸಲಾಗುವುದಿಲ್ಲ.
  3. ಪ್ರತಿ ವಿಶ್ವವಿದ್ಯಾಲಯವು ಶೈಕ್ಷಣಿಕ ಕಾರ್ಯಕ್ರಮಗಳ ಮತ್ತು ಬಹು-ಶಿಸ್ತಿನ ವಿಧಾನವನ್ನು ಹೊಂದಿರುವ ಸಂಶೋಧನಾ ಯೋಜನೆಗಳಿಗೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ಇತರ ವಿಶ್ವವಿದ್ಯಾಲಯಗಳು ಅಥವಾ ಭಾರತ ಮತ್ತು ವಿದೇಶಗಳಲ್ಲಿನ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಯೋಗವನ್ನು ಹೊಂದಿರಬಹುದು.
  4. ವಿಶ್ವವಿದ್ಯಾಲಯವು ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಮತ್ತು ವಿದೇಶದಲ್ಲಿ ಅದರ ಘಟಕ ಸಂಸ್ಥೆಗಳ ಸ್ಥಾಪನೆ, ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ಅಗತ್ಯವಿರುವಂತೆ ವಹಿಸಿಕೊಳ್ಳಬಹುದು.

ಹೊಸ ವರ್ಷ ನಮ್ಮ ಭಾವನೆಗಳನ್ನು ಇನ್ನಷ್ಟು ಹೊಸದಾಗಿಸುವ ಸಮಯ. ನಮ್ಮೆಲ್ಲರ ಸಂಬಂಧ ಹೊಸತರಂತೆ ಮಿನುಗಲಿ. ಹೊಸ ವರ್ಷದ ಶುಭಾಶಯಗಳು 2026

 

Scroll to Top