ಇತಿಹಾಸ ಮತ್ತು ಪ್ರಾರಂಭ

ಧಾರವಾಡ ಕೃಷಿ ವಿಶ್ವವಿದ್ಯಾಲಯವು 1986 ರ ಅಕ್ಟೋಬರ್ 1ರಂದು ಸ್ಥಾಪಿತವಾಯಿತು ವಿಶ್ವವಿದ್ಯಾಲಯವು 5 ಮಹಾವಿದ್ಯಾಲಯಗಳು , 27 ಸಂಶೋಧನಾ ಕೇಂದ್ರಗಳು, 6 ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು, 6 ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರವನ್ನು ಹೊಂದಿದೆ. ವಿಶ್ವವಿದ್ಯಾನಿಲಯವು ಉತ್ತರ ಕರ್ನಾಟಕದ 7 ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭೌಗೋಳಿಕ ಕ್ಷೇತ್ರವ್ಯಾಪ್ತಿ ಹೊಂದಿದೆ. ಮಣ್ಣಿನ ವಿಧಗಳು, ಹವಾಮಾನ, ಭೂಗೋಳದ ಬೆಳೆ ಮತ್ತು ಕೃಷಿ ಪರಿಸ್ಥಿತಿಗಳಲ್ಲಿ ಹೆಚ್ಚಿನ ವೈವಿಧ್ಯ ಅಸ್ತಿತ್ವದಲ್ಲಿದೆ. ಭೌಗೋಳಿಕ ಕ್ಷೇತ್ರವ್ಯಾಪ್ತಿಯು ಒಣ ಬೇಸಾಯದಿಂದ ಹಿಡಿದು ಭಾರೀ ಮಳೆ ಮತ್ತು ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ಈ ಪ್ರದೇಶದ ಪ್ರಮುಖ ಬೆಳೆಗಳೆಂದರೆ ಜೋಳ , ಹತ್ತಿ, ಭತ್ತ, ಬೇಳೆಕಾಳುಗಳು, ಮೆಣಸಿನಕಾಯಿ, ಕಬ್ಬು, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ಗೋಧಿ, ಕುಸುಬೆ ಮುಂತಾದವು.. ಈ ಪ್ರದೇಶವು ಅನೇಕ ತೋಟಗಾರಿಕಾ ಬೆಳೆಗಳಿಗೂ ಹೆಸರುವಾಸಿಯಾಗಿದೆ.

ಈ ವಿಶ್ವವಿದ್ಯಾಲಯದಿಂದ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ.

ಶ್ರೀ ಎಂ. ಪಿ.ಪಾಟೀಲ
ಸಂಸ್ಥಾಪಕರು
ಕೃಷಿ ಮಹಾವಿದ್ಯಾಲಯ, ಧಾರವಾಡ
ಡಾ. ಎಸ್. ಡಬ್ಲ್ಯೂ. ಮೆಣಸಿನಕಾಯಿ
ಪ್ರಖ್ಯಾತ ಪ್ರಾಂಶುಪಾಲರು
ಕೃಷಿ ಮಹಾವಿದ್ಯಾಲಯ, ಧಾರವಾಡ

ಹೊಸ ವರ್ಷ ನಮ್ಮ ಭಾವನೆಗಳನ್ನು ಇನ್ನಷ್ಟು ಹೊಸದಾಗಿಸುವ ಸಮಯ. ನಮ್ಮೆಲ್ಲರ ಸಂಬಂಧ ಹೊಸತರಂತೆ ಮಿನುಗಲಿ. ಹೊಸ ವರ್ಷದ ಶುಭಾಶಯಗಳು 2026

 

Scroll to Top