ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು(ಕೃವಿಶಿಕೇಂ ಗಳು)

1967 ರಲ್ಲಿ ಪ್ರಾರಂಭವಾದ ಪ್ರಾಯೋಗಿಕ ವಿಸ್ತರಣೆ ಯೋಜನೆಯ ಯಶಸ್ಸಿನ ಆಧಾರದ ಮೇಲೆ 1970 ರಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳನ್ನು (ಎಇಇಸಿ) ಪ್ರಾರಂಭಿಸಲಾಯಿತು. ಈ ಕೇಂದ್ರಗಳು ಕ್ಷೇತ್ರ ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸಲು ನೋಡಲ್ ಏಜೆನ್ಸಿಗಳಾಗಿವೆ. ಪ್ರತಿಯೊಂದು ಕೇಂದ್ರವು ತಳಮಟ್ಟದಲ್ಲಿ ಕ್ಷೇತ್ರದ ಕಾರ್ಯನಿರ್ವಾಹಕರನ್ನು ಸಂಘಟಿಸಲು ಮತ್ತು ಸಹಾಯ ಮಾಡಲು ವಿಷಯ ತಜ್ಞರ ತಂಡವನ್ನು ಹೊಂದಿದೆ. ಈ ಘಟಕಗಳು ರೈತರಿಗೆ ಹೊಸದಾಗಿ ಅಭಿವೃದ್ಧಿಪಡಿಸಿದ ಕೃಷಿ ತಂತ್ರಜ್ಞಾನಗಳನ್ನು ಸಮಗ್ರ ರೀತಿಯಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತವೆ, ಹಾಗೂ ಭೂಮಿಯ ಒಂದು ನಿಗದಿತÀ ಪ್ರದೇಶದಿಂದ ರೈತರ ನಿವ್ವಳ ಆರ್ಥಿಕ ಆದಾಯವನ್ನು ಹೆಚ್ಚಿಸುವ ಅಂತಿಮ ಗುರಿ ಹೊಂದಿದೆ.

ಕೃಷಿ ವಿಶ್ವವಿದ್ಯಾಲಯ, ಧಾರವಾಡದವ್ಯಾಪ್ತಿಗೆ ಒಳಪಡುವ ಐದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳುಈ ಕೆಳಕಂಡ ಆದೇಶಗಳೊಂದಿಗೆ ಬೆಳವಟಗಿ, ಕುಮಟಾ, ಮುಧೋಳ, ಸಂಕೇಶ್ವರ ಮತ್ತು ವಿಜಯಪುರದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಆದೇಶಗಳು

  1. ಕೃಷಿ ಪ್ರಯೋಗಗಳ ಮೂಲಕ ಸಂಶೋಧನಾ ಫಲಿತಾಂಶಗಳ ಕಾರ್ಯಕ್ಷಮತೆಯ ಮೌಲ್ಯಮಾಪನ.
  2. ಸಾಬೀತಾದ ಸಂಶೋಧನಾ ಫಲಿತಾಂಶಗಳ ಪ್ರಾತ್ಯಕ್ಷಿಕೆ.
  3. ಕೃಷಿ ಕುಟುಂಬದ ಆದಾಯವನ್ನು ಹೆಚ್ಚಿಸಲು ಸಂಪೂರ್ಣ ಕೃಷಿ ಪ್ರಾತ್ಯಕ್ಷಿಕೆÀಗಳ ಸಂಘಟನೆ.
  4. ಸಂಶೋಧನೆಗೆ ಪ್ರತಿಕ್ರಿಯೆ ನೀಡಲು ಔಪಚಾರಿಕವಲ್ಲದ ಶೈಕ್ಷಣಿಕ ಚಟುವಟಿಕೆಗಳಾದಅಧ್ಯಯನ ಪ್ರವಾಸ, ಕ್ಷೇತ್ರೋತ್ಸವಗಳು ಮತ್ತು ಕ್ಷೇತ್ರ ಭೇಟಿಗಳÀ ಸಂಘಟನೆ.
  5. ಅಭಿವೃದ್ಧಿ ಇಲಾಖೆಗಳು ಮತ್ತು ಇತರ ಏಜೆನ್ಸಿಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ನಡೆಸುವುದು.

ಹೊಸ ವರ್ಷ ನಮ್ಮ ಭಾವನೆಗಳನ್ನು ಇನ್ನಷ್ಟು ಹೊಸದಾಗಿಸುವ ಸಮಯ. ನಮ್ಮೆಲ್ಲರ ಸಂಬಂಧ ಹೊಸತರಂತೆ ಮಿನುಗಲಿ. ಹೊಸ ವರ್ಷದ ಶುಭಾಶಯಗಳು 2026

 

Scroll to Top