ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು)

ಕೃಷಿ ವಿಜ್ಞಾನ ಕೇಂದ್ರದ ಚಟುವಟಿಕೆಗಳು ಮೌಲ್ಯಮಾಪನ, ವಿವಿಧ ಕೃಷಿ ವ್ಯವಸ್ಥೆಗಳ ಅಡಿಯಲ್ಲಿ ಅದರ ಸ್ಥಳ ನಿರ್ದಿಷ್ಟತೆಯನ್ನು ಗುರುತಿಸಲು ತಂತ್ರಜ್ಞಾನ/ಉತ್ಪನ್ನಗಳ ಪರಿಷ್ಕರಣೆ, ರೈತರ ಹೊಲಗಳಲ್ಲಿ ಸುಧಾರಿತ ಕೃಷಿ ತಂತ್ರಜ್ಞಾನಗಳ ಉತ್ಪಾದನಾ ಸಾಮಥ್ರ್ಯವನ್ನು ಸ್ಥಾಪಿಸಲು ಮುಂಚೂಣಿಯ ಪ್ರಾತ್ಯಕ್ಷಿಕೆಗಳು ಮತ್ತು ರೈತರು, ಗ್ರಾಮೀಣ ಯುವಕರು ಮತ್ತು ವಿಸ್ತರಣಾ ಸಿಬ್ಬಂದಿಗಳ ತರಬೇತಿಯ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ. ಕೃಷಿ ವಿಜ್ಞಾನ ಕೇಂದ್ರಗಳು ಸಾರ್ವಜನಿಕ, ಖಾಸಗಿ ಮತ್ತು ಸ್ವಯಂ ಸೇವಾ ವಲಯಗಳ ಉಪಕ್ರಮಗಳನ್ನು ಬೆಂಬಲಿಸಲು ಕೃಷಿ ತಂತ್ರಜ್ಞಾನದ ಸಂಪನ್ಮೂಲ ಮತ್ತು ಜ್ಞಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ದೇಶದ ಪ್ರತಿ ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಪ್ರಸ್ತುತ ಭಾರತದಲ್ಲಿ 732 ಕೃಷಿ ವಿಜ್ಞಾನ ಕೇಂದ್ರಗಳು, ಕರ್ನಾಟಕದಲ್ಲಿ 34 ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಆರು ಕೃಷಿ ವಿಜ್ಞಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ದೃಷ್ಟಿಕೋನ

ಕೃಷಿ ವಿಜ್ಞಾನ ಕೇಂದ್ರಗಳು ರೈತ ಸಮುದಾಯದ ಉನ್ನತಿಗಾಗಿ ಕೃಷಿ ತಂತ್ರಜ್ಞಾನದ ಪ್ರಮುಖ ಸಂಪನ್ಮೂಲ ಮತ್ತು ಜ್ಞಾನ ಕೇಂದ್ರಗಳಾಗಿವೆ.

ಮಿಷನ್

ಕೃಷಿ ವಿಜ್ಞಾನ ಕೇಂದ್ರಗಳು ಅರ್ಹ ವೃತ್ತಿಪರರಿಂದ ಬೇಡಿಕೆ ಆಧಾರಿತ ಕೃಷಿ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುತ್ತದೆ.

ಅಧ್ಯಾದೇಶಗಳು

  • ವಿವಿಧ ಕೃಷಿ ವ್ಯವಸ್ಥೆಗಳ ಅಡಿಯಲ್ಲಿ ಕೃಷಿ ತಂತ್ರಜ್ಞಾನಗಳ ಸ್ಥಳ ನಿರ್ದಿಷ್ಟತೆಯನ್ನು ಗುರುತಿಸಲು ಆನ್-ಫಾರ್ಮ್ ಪರೀಕ್ಷೆಯನ್ನು ನಡೆಸುವುದು.
  • ರೈತರ ಹೊಲಗಳಲ್ಲಿ ವಿವಿಧ ಬೆಳೆಗಳು ಮತ್ತು ಉದ್ಯಮಗಳ ಉತ್ಪಾದನಾ ಸಾಮಥ್ರ್ಯವನ್ನು ಸ್ಥಾಪಿಸಲು ಮುಂಚೂಣಿಯ ಪ್ರಾತ್ಯಕ್ಷಿಕೆಗಳÀನ್ನು ಆಯೋಜಿಸುವುದು.
  • ತಂತ್ರಜ್ಞಾನದ ಮೌಲ್ಯಮಾಪನ, ಪರಿಷ್ಕರಣೆ ಮತ್ತು ಪ್ರಾತ್ಯಕ್ಷಿಕೆಗೆ ಸಂಬಂಧಿಸಿದ ಆಧುನಿಕ ಕೃಷಿ ತಂತ್ರಜ್ಞಾನಗಳಲ್ಲಿ ರೈತರಿಗೆ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನವೀಕರಿಸಲು ಅಗತ್ಯತೆ ಆಧಾರಿತ ತರಬೇತಿಗಳನ್ನು ಆಯೋಜಿಸುವುದು ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಗಡಿನಾಡು ಪ್ರದೇಶಗಳಲ್ಲಿ ಅವರನ್ನು ಓರಿಯಂಟ್ ಮಾಡಲು ವಿಸ್ತರಣಾ ಸಿಬ್ಬಂದಿಗಳ ತರಬೇತಿ.
  • ಸೂಕ್ತ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಜನಸಾಮಾನ್ಯರಿಗೆ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುವುದು.
  • ಉತ್ತಮ ಗುಣಮಟ್ಟದ ಬೀಜಗಳು ಮತ್ತು ನೆಟ್ಟ ಸಾಮಗ್ರಿಗಳು, ಜಾನುವಾರುಗಳು, ಕೋಳಿ ಮತ್ತು ಮೀನುಗಾರಿಕೆ ತಳಿಗಳು ಮತ್ತು ಉತ್ಪನ್ನಗಳು ಮತ್ತು ರೈತ ಸಮುದಾಯಕ್ಕೆ ವಿವಿಧ ದ್ವಿಉತ್ಪನ್ನಗಳ ಉತ್ಪಾದನೆ ಮತ್ತು ಪೂರೈಕೆ.
  • ಜಿಲ್ಲೆಯ ಕೃಷಿ ಆರ್ಥಿಕತೆಯನ್ನು ಸುಧಾರಿಸಲು ಸಾರ್ವಜನಿಕ, ಖಾಸಗಿ ಮತ್ತು ಸ್ವಯಂ ಸೇವಾ ವಲಯದ ಉಪಕ್ರಮಗಳನ್ನು ಬೆಂಬಲಿಸಲು ಕೃಷಿ ತಂತ್ರಜ್ಞಾನದ ಸಂಪನ್ಮೂಲ ಮತ್ತು ಜ್ಞಾನ ಕೇಂದ್ರವಾಗಿ ಕೆಲಸ ಮಾಡಿ.

ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರಗಳು

ಕ್ರ.ಸಂ.

ಕೃಷಿ ವಿಜ್ಞಾನ ಕೇಂದ್ರದ ಹೆಸರು

ಸ್ಥಾಪನೆಯ ವರ್ಷ

1

ಹಾವೇರಿ (ಹನುಮನಮಟ್ಟಿ) 1976

1976

2

ಧಾರವಾಡ 2004

2004

3

ಉತ್ತರ ಕನ್ನಡ (ಸಿರ್ಸಿ) 2004

2004

4

ವಿಜಯಪುರ-1 2004

2004

5

ಬಾಗಲಕೋಟೆ 2005

2005

6

ವಿಜಯಪುರ-IIಇಂಡಿ) 2016

2016

ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಕೃಷಿಮೇಳ-2025ನ್ನು ಸೆಪ್ಟೆಂಬರ್ 13 ರಿಂದ 16 ರವರೆಗೆ “ಪೌಷ್ಠಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು” ಎಂಬ ಘೋಷವಾಕ್ಯದಡಿ ಆಯೋಜಿಸಲಾಗಿದೆ.

Scroll to Top