ಮುಖ್ಯ ಕೃಷಿ ಸಂಶೋಧನಾ ಕೇಂದ್ರ, ಧಾರವಾಡ
ಮುಖ್ಯ ಕೃಷಿ ಸಂಶೋಧನಾ ಕೇಂದ್ರ, ಧಾರವಾಡ 1947ರಲ್ಲಿ. ಸ್ಥಾಪನೆಯಾದ ಅತ್ಯಂತ ಹಳೆಯ ಕೇಂದ್ರವಾಗಿದೆ. ಆರಂಭದಿಂದ ಇಲ್ಲಿಯವರೆಗೆ ಹಲವಾರು ಸಾಧನೆಗಳನ್ನು ರೈತ ಸಮುದಾಯದ ಹಿತಾಸಕ್ತಿಗಾಗಿ ಕೈಗೊಂಡಿದೆ. ಈ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ. ಒಂಖS, ಸಾವಯವ ಕೃಷಿ ಸಂಸ್ಥೆ, ಮೇವು ಸಂಶೋಧನೆ ಮತ್ತು ಉತ್ಪಾದನಾ ಘಟಕ, ಜಾನುವಾರು ಘಟಕಗಳು (ಡೈರಿ, ಕೋಳಿ, ಕುರಿ ಮತ್ತು ಮೇಕೆ), ಡೈರಿ ಘಟಕ, ಹೈಟೆಕ್ ತೋಟಗಾರಿಕೆ, ತೋಟಗಾರಿಕೆ ಮತ್ತು ಸೈದಾಪುರ ಫಾರ್ಮ್ ಇವುಗಳನ್ನು ಒಳಗೊಂಡಿದೆ..

ಕ್ಷೇತ್ರ ವಿಭಾಗ
ಈ ಕೇಂದ್ರವು ಮುಖ್ಯವಾಗಿ ಎಲ್ಲಾ ಬೋಧನಾ ವಿಭಾಗಗಳಿಗೆ ಸೇವೆಯನ್ನು ಒದಗಿಸಲು, ವಿವಿಧ ಬೆಳೆಗಳು, AICRP ಯೋಜನೆಗಳು ಮತ್ತು ಕಾರ್ಯಕ್ರಮಗಳ ಸುಗಮ ನಿರ್ವಹಣೆಗಾಗಿ ಕಾರ್ಯನಿರ್ವಹಿಸುತ್ತದೆ.
- ನೆಲಗಡಲೆ, ಸೋಯಾಬೀನ್, ಧಾನ್ಯ ಮತ್ತು ಗೋವಿನ ಜೋಳದ ತಳಿ, ತಾಯಿ ಬೀಜ ಮತ್ತು ಪ್ರಮಾಣೀಕೃತ ಬೀಜ ಉತ್ಪಾದನೆಯಲ್ಲಿ ಕೇಂದ್ರವು ತೊಡಗಿಸಿಕೊಂಡಿದೆ. ತಾಯಿ ಬೀಜ ಕ್ರಿಯಾ ಯೋಜನೆಯ ಪ್ರಕಾರ ಮುಂಗಾರು ಬೀಜೋತ್ಪಾದನೆ ಕೈಗೊಳ್ಳುವದು.
- ಹಿಂಗಾರು ಬ್ರೀಡರ್, ಫೌಂಡೇಶನ್ ಮತ್ತು ಸತತ ಕಾಳು, ಜೋಳ, ಗೋಧಿ ಮತ್ತು ಕುಸುಬೆಗಳ ಪ್ರಮಾಣೀಕೃತ ಬೀಜ ಉತ್ಪಾದನೆಯನ್ನು ಬೀಜ ಉತ್ಪಾದನಾ ಕ್ರಿಯಾ ಯೋಜನೆಯ ಪ್ರಕಾರ ಕೈಕೊಳ್ಳಲಾಗುವುದು.
- ಕೇಂದ್ರವು 20 ಜೋಡಿ ಎತ್ತುಗಳೊಂದಿಗೆ (ಕಿಲಾರ್ ಮತ್ತು ಹಳ್ಳಿಕಾರ್ ತಳಿ) ದನದ ಕೊಟ್ಟಿಗೆಯನ್ನು ಹೊಂದಿದೆ.
- ಮಣ್ಣು ಮತ್ತು ನೀರಿನ ಸವೆತವನ್ನು ತಪ್ಪಿಸಲು ಎಫ್ ಬ್ಲಾಕ್ನಲ್ಲಿ ಎಂಟು ಕಲ್ವರ್ಟ್ಗಳನ್ನು ನಿರ್ಮಿಸಲಾಗಿದೆ.
- ಈ ವರ್ಷ ಬೀಜ ಉತ್ಪಾದನಾ ಪ್ಲಾಟ್ಗಳಲ್ಲಿ ಏಕರೂಪದ ಮೊಳಕೆಯೊಡೆಯಲು ಸಂಪೂರ್ಣವಾಗಿ ನಾಲ್ಕು ಸ್ವಯಂಚಾಲಿತ ಬೀಜ, ರಸಗೊಬ್ಬರ ಬಿತ್ತುವ ಕೂರಿಗೆ ಖರೀದಿಸಿ ಬಳಸಲಾಗಿದೆ.
- ಭೂಮಿಯನ್ನು ಸಮತಟ್ಟು ಮಾಡುವ ಸಲುವಾಗಿ ಎರಡು ಮರದ ಕುಂಟೆಗಳನ್ನು ಖರೀದಿಸಿ ಬಳಸಲಾಗಿದೆ.
- ಪ್ರತಿ ವರ್ಷ ಜಮೀನಿನ ರಸ್ತೆಗಳು ಮತ್ತು ಬದುವುಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ.
- ಈ ವರ್ಷ ದೊಡ್ಡ ಪ್ರಮಾಣದ ಎರೆಗೊಬ್ಬರ ಉತ್ಪಾದನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಅಂದಾಜು 150 ಟನ್ ಎರೆಗೊಬ್ಬರ ಉತ್ಪಾದಿಸಲಾಗುತ್ತದೆ.
- ವಿವಿಧ ಬೆಳೆಗಳಲ್ಲಿ ಬಿಡುಗಡೆಯಾದ ತಳಿಗಳ ಬೀಜೋತ್ಪಾದನೆ ಮತ್ತು ಜನಪ್ರಿಯಗೊಳಿಸುವಿಕೆ.
- ವಿಶ್ವವಿದ್ಯಾಲಯದ ಮಾರ್ಗಸೂಚಿಗಳ ಪ್ರಕಾರ ಹೊಸ ರಾಸಾಯನಿಕ ಪರೀಕ್ಷಾ ಪ್ರಯೋಗಗಳನ್ನು ಕೈಗೊಳ್ಳವದು.
- ಪ್ರತಿ ವರ್ಷ ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಶೇ 25% ಭೂಮಿಯನ್ನು ವಿವಿಧ ಬ್ಲಾಕ್ಗಳಲ್ಲಿ ಸಣಬು ಹಸಿರು ಗೊಬ್ಬರ ಬೆಳೆಯಲಾಗುತ್ತದೆ.
- ಮುಖ್ಯ ಕ್ಯಾಂಪಸ್ನಲ್ಲಿ ಸುಮಾರು 3000 ಕೆಂಪು ಚಂದನ, ಇತರೆ ಹಣ್ಣುಗಳು ಮತ್ತು ಇತರೆ ಅರಣ್ಯ ಜಾತಿಗಳ ಸಸಿಗಳನ್ನು ನೆಡಲಾಗಿದೆ.
- ಅಂತಿಮ ವರ್ಷ ಕೃಷಿ ಪದವಿ ವಿದ್ಯಾರ್ಥಿಗಳಿಗೆ ಕೃಷಿ ತ್ಯಾಜ್ಯ ನಿರ್ವಹಣೆಯಲ್ಲಿ (ARM) ಅನುಭವದ ಕಲಿಕೆ ಕಾರ್ಯಕ್ರಮ.
- ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳಿಗೆ RAWE ತರಬೇತಿ ಕಾರ್ಯಕ್ರಮ.
- ನ್ಯೂಕ್ಲಿಯಸ್, ಬ್ರೀಡರ್, ಫೌಂಡೇಶನ್, ಪ್ರಮಾಣೀಕೃತ, ಮತ್ತು ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ವಿವಿಧ ಬೆಳೆಗಳ ನಿಜ ಬೀಜಗಳ ಬೀಜ ಉತ್ಪಾದನಾ ಕಾರ್ಯಕ್ರಮ: (ಸೋಯಾಬೀನ್, ನೆಲಗಡಲೆ, ತೊಗರಿ, ಕರಿಬೇವು, ಮೆಕ್ಕೆಜೋಳ, ಗೋವಿನಜೋಳ, ಸಣಬು, ಜೋಳ, ಕಡಲೆ, ಕುಸುಬೆ, ಗೋಧಿ ಮತ್ತು ಹಸಿರು ಮೇವು).
- ಸಾವಯವ ಗೊಬ್ಬರ ಮತ್ತು ಎರೆಗೊಬ್ಬರ ಉತ್ಪಾದನೆ: ವಾರ್ಷಿಕವಾಗಿ ನೂರು 300 ಮೆ.ಟನ್ ಸಾವಯವ ಗೊಬ್ಬರ ಜೊತೆಗೆ 100 ಟನ್ ಎರೆಗೊಬ್ಬರ ಉತ್ಪಾದನೆಯಾಗುತ್ತದೆ. ಒಂಖS ನ ವಿವಿಧ ಬ್ಲಾಕ್ಗಳಿಗೆ (ಕ್ಷೇತ್ರಗಳಿಗೆ) ಈ ಗೊಬ್ಬರ ಬಳಸಲಾಗುತ್ತದೆ.
MARS, ಧಾರವಾಡ ಬುಲಕ್ ಶೆಡ್, ಮಾರ್ಸ್, ಧಾರವಾಡ

